Ad Widget

KPS ಶಾಲೆ ಗಾಂಧಿನಗರ ಸುಳ್ಯ ಇಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಶಾಸಕರು ಭಾಗಿ


ಸುಳ್ಯ ಗಾಂಧಿನಗರದ ಕೆಪಿಎಸ್ ಶಾಲೆಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ  ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ  ಭಾಗವಹಿಸಿದರು.
ಕೋಟೆ ಫೌಂಡೇಶನ್ ವತಿಯಿಂದ ಕೊಡಲ್ಪಟ್ಟ ಡೆಸ್ಕ್ ಮತ್ತು ಬೆಂಚುಗಳನ್ನು ಮತ್ತು ಸರಕಾರದ ಅನುದಾನದಿಂದ ರಚಿಸಿದ‌ ಸುಸಜ್ಜಿತ ಗಣಕಯಂತ್ರ ವಿಭಾಗ ಹಾಗೂ 2023-2024ರಲ್ಲಿ ಹತ್ತನೆತರಗತಿಯಲ್ಲಿ ವಿಶಿಷ್ಟ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು  ಹಿಂದಿನ ಕಾಲದಲ್ಲಿ ಶಿಕ್ಷಣ ಜೊತೆಯಲ್ಲಿ ಶಿಕ್ಷೆ ಕೂಡ ಇತ್ತು ಅದರೆ ಈಗ ಕೇವಲ ಶಿಕ್ಷಣ ಮಾತ್ರ ನೀಡಲಾಗುತ್ತದೆ ಇದರಿಂದಾಗಿ ಶಾಲೆ ಬಿಡುವವರ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಆಗಿದೆ ಹಾಗಾಗಿ ನಿಮ್ಮ ಶಾಲೆ ಇಂದು ಶೇಕಡಾ100 ಫಲಿತಾಂಶವನ್ನು ಪಡೆಯುವಂತೆ ಆಯಿತು. ಈ ಶಾಲೆಯಲ್ಲಿ ಕಲಿತು  ಶಾಲೆಗೆ, ತಂದೆ ತಾಯಿಗೆ, ಶಿಕ್ಷಕರಿಗೆ ನೀವೂ ಒಳ್ಳೆಯ ಹೆಸರನ್ನು ತಂದಿದ್ದಿರಿ ಇನ್ನೂ ಮುಂದೆಯು ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಿ ಮತ್ತು ಫಲಿತಾಂಶ ಬರುವುದಕ್ಕೆ ವಿಶೇಷ  ಗಮನಹರಿಸಿದ ಶಿಕ್ಷಕರಿಗೆ ನನ್ನ ಅಭಿನಂದನೆಗಳು ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಧಿಕಾರಿ ರಮೇಶ್, ಕಾಲೇಜು ಪ್ರಾಂಶುಪಾಲರು, ಕೋಟೆ ಫೌಂಡೇಶನ್ ನ‌‌ ಮುಖ್ಯಸ್ಥ ಪ್ರದೀಪ್ ಹಾಗೂ ಸಂಸ್ಥೆಯ ವಿವಿಧ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಶಾಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading