ಪುತ್ತೂರಿನ ನರಿಮೊಗರಿನ ಪಾದೆ ಎಂಬಲ್ಲಿರುವ ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ಪ್ರತೀ ದಿನ ಸಂಜೆ 6 ಗಂಟೆಗೆ ,
ದಿನಾಂಕ 14/6/2024 ಶುಕ್ರವಾರದಿಂದ 20/6/2024 ಗುರುವಾರದ ತನಕ ಉಚಿತ ಯೋಗ ತರಬೇತಿ ನಡೆಯಲಿರುವುದು . ಯೋಗ ಶಿಕ್ಷಕರಾದ ಶ್ರೀ ಚಂದ್ರಶೇಖರ . ಎನ್ . ತರಬೇತಿ ನೀಡಲಿರುವರು .21/6/2024 ಶುಕ್ರವಾರದಂದು ಯೋಗ ದಿನಾಚರಣೆಯ ನಿಮಿತ್ತ ಬೆಳಿಗ್ಗೆ 7 ಗಂಟೆಗೆ ಕಾರ್ಯಕ್ರಮವಿದೆ . ತರಬೇತಿಯು ಸರಳ ಆಸನ , ಪ್ರಾಣಾಯಾಮ ಹಾಗೂ ಧ್ಯಾನವನ್ನು ಒಳಗೊಂಡಿರುವುದು . ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದು. “ಎಲ್ಲರೂ ಪಾಲ್ಗೊಳ್ಳಿ . ಯೋಗದ ಈ ಆನಂದದಲ್ಲಿ ನೀವೆಲ್ಲ ಭಾಗಿಗಳಾಗಿ . ಸುಖದುಃಖಮಯ ಜೀವನದಿಂದ ಆನಂದಮಯ ಜೀವನದೆಡೆಗೆ ಹೋಗುವ ದಾರಿಯೇ ಯೋಗ . ಅದುವೇ ಮಾನವನ ಗುರಿ ಆಗಿರಬೇಕು .” ಎಂದು ಆಸ್ಪತ್ರೆಯ
ಆಡಳಿತ ನಿರ್ದೇಶಕರು ಹಾಗೂ ಖ್ಯಾತ ಆಯುರ್ವೇದ ತಜ್ಞ ವೈದ್ಯರೂ ಆಗಿರುವ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ತಿಳಿಸಿದ್ದಾರೆ . ಗೂಗಲ್ ಫಾರ್ಮ್ ತುಂಬಿ ನೋಂದಾಯಿಸಿಕೊಳ್ಳಲು , ಹೆಚ್ಚಿನ ಮಾಹಿತಿಗೆ
Mob . 9740545979 ಸಂಪರ್ಕಿಸಬಹುದಾಗಿದ್ದು, ತರಬೇತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಶುಲ್ಕ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024