ಕಾಳುಮೆಣಸಿನ ದರ ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರು ನಿರೀಕ್ಷೆಯಲ್ಲಿದ್ದಾರೆ. ಹವಾಮಾನದ ಕಾರಣ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಏರುತ್ತಿದೆ ಎನ್ನಲಾಗಿದೆ. ಖಾಸಗಿ ಮಾರುಕಟ್ಟೆಗಳಲ್ಲಿ ಕಾಳುಮೆಣಸು ಕೆ.ಜಿ. ಗೆ ರೂ. 680 ರ ವರೆಗೆ ಏರಿಕೆಯಾಗಿದ್ದು, ಕಳೆದ 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ ಆಗಿದೆ. ಆದರೆ, 2018 ರಲ್ಲಿ ಕೆ.ಜಿ ಮೆಣಸಿನ ಬೆಲೆ ರೂ. 780 ಗೆ ತಲುಪಿತ್ತು. ಹೀಗಾಗಿ ಬೆಳೆಗಾರರು 2018 ರಲ್ಲಿದ್ದ ಬೆಲೆಯನ್ನು ದಾಟಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ವ್ಯಾಪಾರಸ್ಥರ ಪ್ರಕಾರ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
- Tuesday
- December 3rd, 2024