ಯುವಕನೋರ್ವ ಕಳೆದೆರಡು ವರ್ಷಗಳಿಂದ ತನ್ನನ್ನು ಪ್ರೀತಿಸಿ ಇದೀಗ ಸಂಪರ್ಕಕ್ಕೆ ಸಿಗದೇ ವಂಚಿಸಿ ನಾಪತ್ತೆಯಾಗಿದ್ದಾನೆ ಎಂದು ಯುವತಿಯೋರ್ವಳು ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ ಘಟನೆ ವರದಿಯಾಗಿದೆ.
ಎಣ್ಮೂರು ಗ್ರಾಮದ ನಿಂತಿಕಲ್ಲು ಕಾಲನಿ ನಿವಾಸಿ ಅಶ್ವಿತ್ ಎಂಬ ಯುವಕ ಹಾಗೂ ಬೆಳ್ಳಾರೆ ಮೂಲದ ಯುವತಿ ಪರಸ್ಪರ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ. ಇದೀಗ ಫೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
- Thursday
- November 21st, 2024