ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಸ್ವರ ಮಾಂತ್ರಿಕ, ಗಾನಗಂಧರ್ವ, ಪದ್ಮಭೂಷಣ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅವರ 78ನೇ ಜನ್ಮದಿನಾಚರಣೆಯ ಪ್ರಯುಕ್ತ ಎಸ್ ಪಿ ಬಿ ಸಂಗೀತ ಸಂಭ್ರಮ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದ ವೇದಿಕೆಯಲ್ಲಿ ಜೂನ್ 9ರಂದು ಜರುಗಿತು.
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರು, ಗಾಯಕರು ಮತ್ತು ಚಿತ್ರ ನಿರ್ದೇಶಕರಾದ ಹೆಚ್. ಭೀಮರಾವ್ ವಾಷ್ಠರ್ ರವರು ವಹಿಸಿ, ಎಸ್ ಪಿ ಬಾಲಸುಬ್ರಮಣ್ಯಮ್ ಅವರ ಸಾಧನೆ, ವ್ಯಕ್ತಿತ್ವದ ಗುಣಗಾನ ಮಾಡಿದರು. ವಾಷ್ಠರ್ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ, “ಭಾರತ ಕಂಡ ಅತ್ಯದ್ಭುತ ಗಾಯಕರಲ್ಲಿ ಒಬ್ಬರಾದ ಎಸ್ ಪಿ ಬಿ ಸಂಗೀತ ಮಾಣಿಕ್ಯ ಮತ್ತು ಅಜಾತ ಶತ್ರು. ಕರ್ನಾಟಕದಲ್ಲಿಯೇ ಹುಟ್ಟಬೇಕು ಎಂಬ ಇಂಗಿತವನ್ನು ಆಗಾಗ ಹಲವು ಸಮಾರಂಭಗಳಲ್ಲಿ ಅವರೇ ಹೇಳಿಕೊಂಡಿದ್ದರು. ಎಲ್ಲಾ ಚಿತ್ರಗಳಲ್ಲಿ ಅವರು ಕನ್ನಡ ನಾಡು ನುಡಿ ಕುರಿತು ಹಾಡಿದ ಹಾಡುಗಳಿದ್ದವು. ಆರು ರಾಷ್ಟ್ರ ಪ್ರಶಸ್ತಿ ಪಡೆದ ಅತ್ಯದ್ಭುತ ಗಾಯಕರು ಮತ್ತು ನಟರೂ ಕೂಡ ” ಎಂದರು. ಮುಖ್ಯ ಅತಿಥಿಗಳಾಗಿ ಗಾಯಕರಾದ ಅರುಣ ರಾವ್ ಜಾದವ್ ಮತ್ತು ಎ. ವಿಜಯಕುಮಾರ್ ಸುಳ್ಯ ವಹಿಸಿ ಚಿತ್ರಗೀತೆಗಳನ್ನು ಹಾಡಿದರು.
ಡಾ. ಎಸ್ ಪಿ ಬಿ ಸಂಗೀತ ಸಂಭ್ರಮದಲ್ಲಿ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅವರು ಹಾಡಿರುವ ಹಾಡುಗಳನ್ನು ಹಾಡಲಾಯಿತು. ಅಶ್ವಿಜ್ ಅತ್ರೇಯ ಸುಳ್ಯ, ತನ್ಮಯ್ ಸೋಮಯಾಗಿ, ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಪುಷ್ಪ ಎಡಮಂಗಲ, ರಾಜೇಂದ್ರ ರಾಜಕುಮಾರ, ಅವನಿ ಎಂ ಎಸ್ ಸುಳ್ಯ, ಸಂದೀಪ್ ಸುಳ್ಯ, ಪ್ರವೀಣ್ ದೇವ, ಸಿ.ಕೆ ಮಾಸ್ಟರ್ ಸ್ಟುಡಿಯೋ,ಸುಳ್ಯ, ಚಂದನ್ ಮುಡೂರು, ಚಿನ್ಮಯ್ ಮುಡೂರು, ಅಂಕಿತಾ ಫೈಲೂರು, ಕುಮಾರ್ ಕೆ ಎಸ್ ಆರ್ ಟಿ ಸಿ, ಸಾಯಿ ಪ್ರಶಾಂತ್ ಕೋಳಿವಾಡ ಇನ್ನಿತರ ಗಾಯಕರು ಹಾಡುಗಳನ್ನು ಹಾಡಿದರು. ಭಾಗವಹಿಸಿದ ಎಲ್ಲಾ ಗಾಯಕರಿಗೆ ಆಕರ್ಷಕ ಸರ್ಟಿಫಿಕೇಟ್ ಗಳನ್ನು ನೀಡಿ ಗೌರವಿಸಲಾಯಿತು.
- Tuesday
- December 3rd, 2024