
ಸುಳ್ಯ: ನವದೆಹಲಿಯಲ್ಲಿ ಸತತವಾಗಿ ಮೂರನೇ ಭಾರಿಗೆ ದೇಶದ ಪ್ರಧಾನ ಮಂತ್ರಿಗಳಾಗಿ ನರೇಂದ್ರ ದಾಮೋಧರ್ ದಾಸ್ ಮೋದಿ ಪದಗ್ರಹಣ ಹಿನ್ನಲೆಯಲ್ಲಿ ತಾಲೂಕಿನಾಧ್ಯಂತ ಸಂಭ್ರಮಾಚರಣೆಯನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ನಡೆಸಲಾಯಿತು.ಸುಳ್ಯ ನಗರ ಶಕ್ತಿ ಕೇಂದ್ರದ ವತಿಯಿಂದ ಫೈಚಾರ್ ಸರ್ಕಲ್ ನಲ್ಲಿ ಸಂಭ್ರಮಾಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ,ದಾಮೋದರ ಮಂಚಿ , ಬಾಳಗೋಪಾಲ ಸೆರ್ಕಜೆ, ನಾರಾಯಣ ಎಸ್ ಎಮ್ ,ಜಗದೀಶ್ ಎನ್ ಆರ್ , ಗಣೇಶ್ ಆರ್ಮಿ, ಸಂಜಯ ಪೈಚರ್ , ಬಾಲಕೃಷ್ಣ ನಡುಬೆಟ್ಟು, ವಿನಯ ನಡುಬೆಟ್ಟು ,ವೆಂಕಟ್ ನಡುಬೆಟ್ಟು, ಕೇಶವ ಫೈಚರ್, ಕುಶಾಲಪ್ಪ ಎಂ, ಚಂದ್ರ ಶೇಖರ ನೂಜಾಡಿ, ಚಂದ್ರು ನಡುಬೆಟ್ಟು ಸೇರಿದಂತೆ ಅಪಾರ ಪ್ರಧಾನಿ ಮೋದಿ ಅಭಿಮಾನಿಗಳು ಕಾರ್ಯಕರ್ತರು ನೇರ ಪ್ರಸಾರ ವೀಕ್ಷಣೆ ಮಾಡುತ್ತಾ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.