Ad Widget

ವಾರ್ಡ್ ಸಮಿತಿ ಕಾರ್ಯಕರ್ತರಿಂದ ಅಶಕ್ತ ವ್ಯಕ್ತಿಗೆ ಮನೆ ನಿರ್ಮಾಣ , ಹಸ್ತಾಂತರ.

ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಅಶಕ್ತ ಕುಟುಂಬವನ್ನು ಗುರುತಿಸಿ ಮನೆ ನಿರ್ಮಿಸಿ ಹಸ್ತಾಂತರ ಕಾರ್ಯಕ್ರಮವು ನಡೆಯಿತು.

ಅಜ್ಜಾವರ ಗ್ರಾಮದ ಮೇನಾಲ ಬಾಡೇಲು ಎಂಬಲ್ಲಿ ಅಶಕ್ತ ವ್ಯಕ್ತಿಯೋರ್ವರು ಕೇವಲ ಟರ್ಪಲ್ ಸಹಾಯದಲ್ಲಿ ಎರಡು ಕೋಲು ಕಟ್ಟಿಕೊಂಡು ವಾಸಿಸುತ್ತಿರುವುದನ್ನು ಕಂಡ ಮೇನಾಲ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರೈ ಮೇನಾಲ ಮತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಂಜಿತ್ ರೈ ಮೇನಾಲರವರ ನೇತೃತ್ವದಲ್ಲಿ ಕಾರ್ಯಕರ್ತರು ಅಶಕ್ತ ವ್ಯಕ್ತಿಗೆ ಮನೆ ನಿರ್ಮಿಸಿ ಕೊಡಬೇಕು ಎಂದು ಆಲೋಚಿಸಿದಾಗ ಮೇನಾಲ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಸಹಾಯವನ್ನು ಪಡೆದು ಶ್ರಮಧಾನದ ಮೂಲಕ ಕೆಲ ಕೆಲಸಗಳನ್ನು ಮಾಡಿದರೆ ಕೆಲವನ್ನು ಗುತ್ತಿಗೆದಾರರ ಮೂಲಕ ಮಾಡಿಸಿದ್ದು ಇದಕ್ಕೆ ಹಲವಾರು ಜನತೆ ಸಹಕರಿಸಿದ್ದಾರೆ ಎಂದು ನಾಯಕರು ತಿಳಿಸಿದ್ದು ಕಾರ್ಯಕರ್ತರಿಂದ ನಿರ್ಮಾಣವಾದ ಮನೆಯನ್ನು ಕಾರ್ಯಕರ್ತರಿಂದ ಹಸ್ತಾಂತರ ಮಾಡಲಾಯಿತು .

ಪ್ರಭಾಕರ ಬೆಳ್ಚಪ್ಪಾಡರು ವಾಸಿಸುತ್ತಿದ್ದ ಗುಡಿಸಲು.

ಮೇನಾಲದ ಪ್ರಭಾಕರ ಬೆಳ್ಚಪ್ಪಾಡರವರು ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು ಸುಮಾರು ೨೦ ವರ್ಷಗಳ ಹಿಂದೆ ಇವರ ಸಹೋದರ ಇದ್ದಾಗ ಅವರ ಹೆಸರಿಗೆ ಸರಕಾರದಿಂದ ಸಿಗುವ ವಸತಿ ಯೋಜನೆಯು ಲಭಿಸಿತ್ತು ಆದರೆ ದುರಾದೃಷ್ಟವೆಂಬಂತೆ ವಸತಿ ಯೋಜನೆಗೆ ಆಯ್ಕೆಗೊಂಡು ಅಡಿಪಾಯ ನಿರ್ಮಿಸಿದಾಗ ಸಹೋದರ ಸಾವನ್ನಪ್ಪಿದರು ಈ ಹಿನ್ನಲೆಯಲ್ಲಿ ಸರಕಾರದ ಅನುದಾನ ಸ್ಥಗಿತಗೊಂಡಿತು ನಂತರದ ದಿನಗಳಲ್ಲಿ ವಾಸಿಸಲು ಮನೆಯಿಲ್ಲದೇ ಬಹಳಷ್ಟು ಕಷ್ಟಪಡಬೇಕಾದ ಅನಿವಾರ್ಯ ಎದುರಾಯಿತು ಅಲ್ಲದೇ ಇವರು ಅವಿವಾಹಿತರಾಗಿದ್ದು ಇದೀಗ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಜೊತೆಗೂಡಿ ಒಂದು ಮನೆಯನ್ನು ನಿರ್ಮಿಸಿ ಜೋಪಡಿಯಿಂದ ಸುಸಜ್ಜಿತ ಮನೆಗೆ ಇಂದಿನಿಂದ ಅಧಿಕೃತವಾಗಿ ವಾಸಿಸಲಿದ್ದಾರೆ ಅಲ್ಲದೇ ವಿಧ್ಯುತ್ ಸಂಪರ್ಕವನ್ನು ಅಳವಡಿಸಿಲ್ಲ ಕೆಲ ದಿನಗಳಲ್ಲಿ ವಿಧ್ಯುತ್ ಸಂಪರ್ಕವನ್ನು ಕೂಡ ಕಲ್ಪಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಸಾದ್ ರೈ ಮೇನಾಲ , ರಂಜಿತ್ ರೈ ಮೇನಾಲ , ಶ್ರೀಧರ ಮಣಿಯಾಣಿ ಮೇನಾಲ , ಮೇನಾಲ ಕುಟುಂಬದ ಹಿರಿಯರಾದ ರವೀಂದ್ರನಾಥ ರೈ ಮೇನಾಲ , ಮಣಿ ಜಯರಾಮ ಮೇನಾಲ, ಪ್ರದೀಪ್ ಪೊಡಂಬು ,ದಾಮೋದರ ಕೊನ್ನೋಡಿ, ಗಂಗಾಧರ್ ಮೇನಾಲ, ಶರಣ್ಯ ತುದಿಯಡ್ಕ, ಸಂದೇಶ ಇರಂತಮಜಲು, ದಾಮೋದರ ಗೌಡ ಕೆದ್ಕಾರು, ಕರುಣಾಕರ ಬಾಡೇಲು, ಮಹಮ್ಮದ್ ಕುಂಞಿ ಮೇನಾಲ, ಪ್ರಕಾಶ ಕಲ್ಲಗುಡ್ಡೆ, ಅಣ್ಣಯ್ಯ ಗೌಡ ಕೆದ್ಕಾರ್, ನಾರಾಯಣ ಇರಂತಮಜಲು ,ಸಿದ್ದೀಕ್ ಇರಂತಮಜಲು, ಹಮೀದ್ ಮೇನಾಲ, ಶೌಕತ್ ಅಲಿ,ಸುಜೀತ ರೈ ಮೇನಾಲ

ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!