Ad Widget

ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ – ರಾಜ್ಯದ ನಾಲ್ವರಿಗೆ ಸಚಿವ ಭಾಗ್ಯ

ಭವ್ಯ ಭಾರತದ ನೂತನ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಜತೆಗೆ ಕರ್ನಾಟಕದ ಸಂಸದರಾಗಿರುವ ಪ್ರಹ್ಲಾದ್ ಜೋಷಿ, ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ ಮತ್ತು ಶೋಭ ಕರಂದ್ಲಾಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಎನ್.ಡಿ.ಎ. ನೇತೃತ್ವದ ಮೋದಿ ಸರಕಾರದಲ್ಲಿ ಸಚಿವರಾಗಲಿರುವ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ಪ್ರಕಾಶ್ ನಡ್ಡಾ, ಶಿವರಾಜ್...

ಪ್ರಧಾನಮಂತ್ರಿಗಳಾಗಿ ನರೇಂದ್ರ ಮೋದಿ ಪದಗ್ರಹಣ ಹಿನ್ನಲೆ ಸುಳ್ಯ ತಾಲೂಕಿನಾಧ್ಯಂತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ.‌

ಸುಳ್ಯ: ನವದೆಹಲಿಯಲ್ಲಿ ಸತತವಾಗಿ ಮೂರನೇ ಭಾರಿಗೆ ದೇಶದ ಪ್ರಧಾನ ಮಂತ್ರಿಗಳಾಗಿ ನರೇಂದ್ರ ದಾಮೋಧರ್ ದಾಸ್ ಮೋದಿ ಪದಗ್ರಹಣ ಹಿನ್ನಲೆಯಲ್ಲಿ ತಾಲೂಕಿನಾಧ್ಯಂತ ಸಂಭ್ರಮಾಚರಣೆಯನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ನಡೆಸಲಾಯಿತು.ಸುಳ್ಯ ನಗರ ಶಕ್ತಿ ಕೇಂದ್ರದ ವತಿಯಿಂದ ಫೈಚಾರ್ ಸರ್ಕಲ್ ನಲ್ಲಿ ಸಂಭ್ರಮಾಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ,ದಾಮೋದರ...
Ad Widget

ಪೆರುವಾಜೆ: ವಿದ್ಯುತ್ ತಂತಿಗೆ ತಾಗುತ್ತಿದ್ದ ಮರದ ಕೊಂಬೆಗಳ ತೆರವು

ಪೆರುವಾಜೆ ಗ್ರಾಮದ ಪೆರುವಾಜೆ-ಮಠತ್ತಡ್ಕದಲ್ಲಿ ಹಾದು ಹೋಗುವ ವಿದ್ಯುತ್ ಲೈನಿಗೆ ತಾಗಿಕೊಂಡಿರುವ ಮರಗಳನ್ನು ಶೌರ್ಯ ವಿಪತ್ತು ತಂಡದಿಂದ ಜೂ.09ರಂದು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸದಸ್ಯರುಗಳಾದ ರಮೇಶ್ ಮಠತ್ತಡ್ಕ, ಶೇಷಪ್ಪ ಮಠತ್ತಡ್ಕ, ಸುಂದರ ನಾಯ್ಕ್, ನಾರಾಯಣ ಮಠತ್ತಡ್ಕ, ರಾಜೇಶ್ ಮಠತ್ತಡ್ಕ, ಪುರುಷೋತ್ತಮ್ ನಾಯ್ಕ್ , ವೆಂಕಪ್ಪ ನಾಯ್ಕ, ಸೀತಾರಾಮ ಆಚಾರ್ಯ,ಯಶವಂತ್, ರಾಜೇಶ್ ಸಾರಕರೆ, ಲೈನ್ ಮಾನ್ ವಸಂತ...

ಸುಬ್ರಹ್ಮಣ್ಯದಲ್ಲಿ ಸೀನಿಯರ್ ಚೇಂಬರ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಸುಬ್ರಹ್ಮಣ್ಯ ,ಜೂನ್ 9: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಇಂದು ರವಿವಾರ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಟಾರದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲೀಜನ್ ಹಾಗೂ ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ವತಿಯಿಂದ ಜಂಟಿಯಾಗಿ ಕಾರ್ಯಕ್ರಮ...

ವಾರ್ಡ್ ಸಮಿತಿ ಕಾರ್ಯಕರ್ತರಿಂದ ಅಶಕ್ತ ವ್ಯಕ್ತಿಗೆ ಮನೆ ನಿರ್ಮಾಣ , ಹಸ್ತಾಂತರ.

ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಅಶಕ್ತ ಕುಟುಂಬವನ್ನು ಗುರುತಿಸಿ ಮನೆ ನಿರ್ಮಿಸಿ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಅಜ್ಜಾವರ ಗ್ರಾಮದ ಮೇನಾಲ ಬಾಡೇಲು ಎಂಬಲ್ಲಿ ಅಶಕ್ತ ವ್ಯಕ್ತಿಯೋರ್ವರು ಕೇವಲ ಟರ್ಪಲ್ ಸಹಾಯದಲ್ಲಿ ಎರಡು ಕೋಲು ಕಟ್ಟಿಕೊಂಡು ವಾಸಿಸುತ್ತಿರುವುದನ್ನು ಕಂಡ ಮೇನಾಲ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರೈ ಮೇನಾಲ ಮತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ...

ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ.

ಸುಳ್ಯ:ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ ರಿ ಸುಳ್ಯ ಇದರ ವಾರ್ಪಿಕ ಮಹಾಸಭೆ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ದಿನಾಂಕ 16/06/24ರಂದು ನಡೆಯಲಿದ್ದು ವಾರ್ಷಿಕ ಮಹಾಸಭೆ ಮತ್ತು ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ದಿನಾಂಕ 02/06/24ರಂದು ಸಂಧ್ಯಾರಶ್ಮಿ ಸಭಾಭವನದಲ್ಲಿ ಬಿಡುಗಡೆ ಗೊಳಿಸಲಾಯಿತು. ಸಂಘವು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಪೂರ್ವಾಭಾವಿ ಸಭೆ...

ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಧಾಕೃಷ್ಣ ರಿಗೆ ಗ್ರಂಥಾಲಯ ಮೇಲ್ವಿಚಾರಕರ ಸಂಘದ ವತಿಯಿಂದ ಸನ್ಮಾನ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಸುಮಾರು 13 ವರ್ಷಗಳ ಕಾಲ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಧಾಕೃಷ್ಣರವರನ್ನು ಜೂ.01 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಸಂಘ ಸುಳ್ಯ ಶಾಖೆಯ 2024-25ನೇ ಸಾಲಿನ...
error: Content is protected !!