
ಪ್ರಧಾನಿ ನರೇಂದ್ರ ಮೋದಿಯವರ ಏಕಾದಿಪತ್ಯ,ದುರಹಂಕಾರ, ಸ್ವಜನಾ ಪಕ್ಷಪಾತ ದುರಾಡಳಿತದಿಂದಾಗಿ ಮತದಾರರು ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ ಕೇಂದ್ರದ ನರೇಂದ್ರ ಮೋದಿಯವರಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಮೋದಿಯವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಸ್ಲಿಂಮರ ಮೀಸಲಾತಿ ಬಗ್ಗೆ ಹಿಂದುಳಿದ ವರ್ಗದವರನ್ನು, ಕಾಂಗ್ರೆಸ್ ಪಕ್ಷವನ್ನು, ನಮ್ಮ ನಾಯಕರನ್ನು ಮತ್ತು ಇತರ ಹಿಂದುಳಿದ ಜಾತಿಯವರನ್ನು ನಿಂದಿಸಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂಪತ್ತುಗಳನ್ನು ಮುಸಲ್ಮಾನರಿಗೆ ಹಂಚಿಕೆ ಮಾಡಲಿದ್ದಾರೆ. ರಾಮಮಂದಿರಕ್ಕೆ ಬೀಗಜಡಿಯಲಿದ್ದಾರೆ. ಸಿ.ಎ.ಎ ಜಾರಿ, ಅಲ್ಪಸಂಖ್ಯಾತರ ಸ್ಕಾಲರ್ ಶಿಫ್ ಗೆ ಕತ್ತರಿ, ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನದಕ್ಕೆ ತಡೆ ಮತ್ತು ದೇಶದ ಸಾಂವಿದಾನಿಕ ಸಂಸ್ಥೆಗಳ ಮೇಲಿನ ದಾಳಿ , ತಮ್ಮ ಭಾಷಣ ಉದ್ದಕ್ಕೂ ಮುಸ್ಲಿಂ ಸಮುದಾಯವನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವರು ಎಂದು ದ್ವೇಷ ಭಾಷಣ ಮಾಡಿದ್ದರು.ಧರ್ಮಗಳ ವಿಭಜನೆ ಮಾಡಿ ಮತ ಪಡೆಯಲು ಪ್ರಯತ್ನಿಸಿದರು, ತಮ್ಮ ಜನವಿರೋದಿ ನೀತಿಯಿಂದ ಮೋದಿಯವರ ಜನಪ್ರಿಯತೆ ನೆಲಕಚ್ಚಿದ್ದು ಮೋದಿಯವರ ಅಲೆ ಇಲ್ಲದಂತಾಗಿದೆ.ವಿಶ್ವ ಗುರು ಆಗಲು ಹೊರಟು ರಾಷ್ಟ್ರ ಗುರುವಾಗಲು ಹೆಣಗಾಡುವ ಪರಿಸ್ಥಿತಿ ಮೋದಿಗೆ ಬಂದಿದ್ದು ರಾಹುಲ್ ಅಲೆ ಕಾಣಿಸುತ್ತಿದ್ದು ವಿಶ್ವ ರಾಹುಲ್ ಗಾಂಧಿಯವರನ್ನು ಎದುರು ನೋಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು, ಭಾರತ್ ಜೋಡೋ ಪಾದಯಾತ್ರೆ ಮುಖಾಂತರ ನರೇಂದ್ರ ಮೋದಿ ಅವರ ವಿಭಜನೆ ಮಂತ್ರಕ್ಕೆ ತಿರುಗೇಟು ನೀಡಿದ್ದಾರೆ. ರಾಜ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಮ್ಮ ಅಭ್ಯರ್ಥಿಯ ಸೋಲಿನ ತೀರ್ಪನ್ನು ಗೌರಿಸುತ್ತೇವೆ. ಈ ಬಗ್ಗೆ ನಮ್ಮ ಕಾರ್ಯಕರ್ತರು ದೃತಿಕೆಡಬೇಕಾಗಿಲ್ಲ ಸೋಲಿನ ಬಗ್ಗೆ ನಾಯಕರು, ಮುಖಂಡರುಗಳು ಹಾಗು ಕಾರ್ಯಕರ್ತರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಪರಸ್ಪರ ಒಬ್ಬರನೊಬ್ಬರು ಟೀಕೆ ಮಾಡುವುದಾಗಲಿ, ದೂಷಿಸುವುದಾಗಲಿ ಸರಿಯಲ್ಲ. ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಬೇಕೆಂದರು. ಸರಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಹಿರಿಯ ನಾಗರಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಬಿ.ಪಿ.ಎಲ್ ಕುಟುಂಬದವರಿಗೆ ಮಾತ್ರ ನೀಡಬೇಕು ಮತ್ತು ಯೋಜನೆಗಳ ಮರು ಪರಿಶೀಲನೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರು ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರಲ್ಲಿ ಟಿ.ಎಂ ಶಾಹಿದ್ ತೆಕ್ಕಿಲ್ ಆಗ್ರಹಿಸಿದರು. ಪಕ್ಷವನ್ನು ಒಗ್ಗಟ್ಟಿನಿಂದ ಕಟ್ಟಿ ಬೆಳೆಸೋಣ. ರಾಹುಲ್ ಗಾಂದಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ರವರ ನಾಯಕತ್ವದಲ್ಲಿ ಸದೃಡಗೊಳಿಸಲು ಕಾರ್ಯಕರ್ತರು ಮತ್ತು ನಾಯಕರು ಒಟ್ಟಾಗಿ ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಹೇಳಿದರು.