
ಸುಳ್ಯ ತಾಲೂಕು ಆಟೋ ಚಾಲಕರ ಸಂಘ (ರಿ.)B.M.S ಸಂಯೋಜಿತ ಕಲ್ಲುಗುಂಡಿ ಘಟಕದ ವಾರ್ಷಿಕ ಮಹಾಸಭೆ ವರದಿಯನ್ನು ಕಲ್ಲುಗುಂಡಿ ಘಟಕದ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ಅವರ ಉಪಸ್ಥಿತಿಯಲ್ಲಿ ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರವಿಕುಮಾರ್ ನಿಡಿಂಜಿ ಅವರು ನೀಡಿದರು. ಸಂಘದ ವಾರ್ಷಿಕ ಲೆಕ್ಕಾಚಾರವನ್ನು ಖಜಾಂಜಿ ಕೃಷ್ಣಪ್ರಸಾದ್ ಕಾಪಿಲ ಅವರು ಮಂಡಿಸಿದರು.

ನೂತನ ಅಧ್ಯಕ್ಷರು ಮತ್ತು ಪದಾಧಿಕರಿಗಳ ಪದಗ್ರಹಣ ಸಮಾರಂಭವು ವಿಷ್ಣುಮೂರ್ತಿ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಮತ್ತು ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ ಅವರ ಉಪಸ್ಥಿತಿಯಲ್ಲಿ ನಡೆಯಿತು.
ನೂತನ ಆಡಳಿತ ಮಂಡಳಿ ಗೌರವ ಅದ್ಯಕ್ಷರು ವಸಂತ ಊರುಬೈಲು ಅಧ್ಯಕ್ಷರು ಕೇಶವ ಬಂಗ್ಲೆಗುಡ್ಡೆ ಕಾರ್ಯದರ್ಶಿ ಪ್ರಮೋದ್ ಕೈಪಡ್ಕ
ಖಜಾಂಜಿ ಕೃಷ್ಣಪ್ರಸಾದ್ ಕಾಪಿಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ 15 ವರ್ಷಗಳಿಂದ ಕಲ್ಲುಗುಂಡಿ ಘಟಕದ ಅಧ್ಯಕ್ಷರಾಗಿದ್ದ ವಸಂತ ಊರುಬೈಲು ಅವರನ್ನು ಸನ್ಮಾನಿಸಲಾಯಿತು.