
ಬಳ್ಪ-ಗುತ್ತಿಗಾರು ರಸ್ತೆಯ ಕ್ರಾಸ್ ನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ಹಂಪ್ ಹಾಕಲಾಗಿದ್ದು , ಹಲವು ವಾಹನ ಸವಾರರು ಹಂಪ್ಸ್ ನಿಂದ ಸಮಸ್ಯೆ ಅನುಭವಿಸಿದ್ದಾರೆ. ಇದನ್ನು ಮನಗಂಡ ಸಾಮರಸ್ಯ ಸೇವಾ ಬಳಗ ಕಮಿಲ ಇದರ ಸದಸ್ಯರು ಉಬ್ಬು ರಸ್ತೆಗೆ ಸೂಚಕ ಬಣ್ಣ ಬಳಿದು ಮುಂದೆ ಸಾರ್ವಜನಿಕರಿಗೆ ಅಗಬಹುದಾದ ಅಪಾಯವನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ.
