
ಎಸ್. ಎಸ್. ಎಲ್.ಸಿ ಫಲಿತಾಂಶ ಮೇ 9ರಂದು ಪ್ರಕಟಗೊಂಡಿದ್ದು, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಪಿ.ಎನ್., ಮರು ಎಣಿಕೆಯ ನಂತರದ ಫಲಿತಾಂಶ ದಲ್ಲಿ 611ರ ಬದಲಾಗಿ
617 ಅಂಕ ಪಡೆದುಕೊಂಡಿದ್ದಾರೆ.
ಪ್ರಥಮ ಫಲಿತಾಂಶದಲ್ಲಿ ಗಣಿತ ವಿಷಯ ಮೌಲ್ಯ ಮಾಪನದಲ್ಲಿ ಮೌಲ್ಯ ಮಾಪಕರ ಎಣಿಕೆಯ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯು ನಾಲ್ಕು ಅಂಕಗಳನ್ನು ಕಳೆದುಕೊಂಡಿದ್ದಳು.
ಇಂಗ್ಲಿಷ್ ಭಾಷಾ ವಿಷಯದಲ್ಲಿ 123 ಅಂಕಗಳು ಬಂದಿದ್ದು ಮರು ಮೌಲ್ಯ ಮಾಪನದ ಬಳಿಕ 125 ಪೂರ್ಣ ಅಂಕಗಳನ್ನು ಪಡೆದುಕೊಂಡು ಒಟ್ಟು 06 ಅಂಕಗಳ ಹೆಚ್ಚಳದಿಂದ ಒಟ್ಟು 617ಅಂಕಗಳನ್ನು ಪಡೆದು 98.72 ಶೇಕಡಾ ವನ್ನು ತನ್ನದಾಗಿಸಿಕೊಂಡಿದ್ದಾಳೆ. ಸಮಾಜ ವಿಜ್ಞಾನ ವಿಷಯದಲ್ಲಿ 3 ಅಂಕಗಳ ನಿರೀಕ್ಷೆ ಯಿದ್ದು ಅದು ಪ್ರಯೋಜನಕಾರಿಯಾಗಲಿಲ್ಲ.
ಸಾನ್ವಿ ಪಿ. ಎನ್., ಜಪಾನ್ ನಲ್ಲಿ ಉದ್ಯೋಗಿಯಾಗಿರುವ ನಾರಾಯಣ ಗೌಡ ಪೋಳ್ಯ ಹಾಗೂ
ಸುಳ್ಯದ ಕೇರ್ಪಳದ ಶ್ರೀಮತಿ. ವಿನುತಾ ನಾರಾಯಣ ದಂಪತಿಗಳ ಪುತ್ರಿ.