
ಸುಳ್ಯ: ಕೇಂದ್ರದಲ್ಲಿ ಎನ್ ಡಿ ಎ ಸರಕಾರ ನಿಶ್ಚಿತ , ಮೋದಿ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹೇಳಿದರು. ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 272 ಮ್ಯಾಜಿಕ್ ನಂಬರ್ ಅವಶ್ಯಕತೆಯಿದ್ದು ನಮ್ಮ ಎನ್ ಡಿ ಎ ಮೈತ್ರಿ ಕೂಟದಲ್ಲಿ 290 ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿದ್ದು ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಕೆಲಸ ನಿರ್ವಹಿಸಲಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿ ಹಾಕದೇ ಇರುವುದು ಮತ್ತು ನೋಟದ ಮತ ಪರಿಣಾಮದಿಂದಾಗಿ ಕಾಂಗ್ರೆಸ್ ಗೆ ಜಾಸ್ತಿ ಬೆಂಬಲ ದೊರೆತು ಬಿಜೆಪಿ ಗೆಲುವಿನಲ್ಲಿ ಲೀಡ್ ಕಡಿಮೆಯಾಗಿದೆ. ಆದರು ನಿರೀಕ್ಷೆಯಂತೆ ಸುಳ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯು ಬಿಜೆಪಿ ಮುನ್ನಡೆ ಪಡೆದುಕೊಂಡಿದ್ದು ನಮ್ಮ ಸಂಸದರಾಗಿ ಆಯ್ಕೆಯಾದ ಬೃಜೇಶ್ ಚೌಟರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದಾರೆ ಎಂದು ಅಮರ ಸುದ್ದಿಗೆ ತಿಳಿಸಿದ್ದಾರೆ.
