
ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದ ಘಟನೆ ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕದಲ್ಲಿ ನಿನ್ನೆ ಸಂಜೆ ಜೂನ್ (3ರಂದು) ಸಂಭವಿಸಿದೆ.
ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕ ಯಶೋಧರರವರ ಮನೆಗೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಮನೆಯ ಕಿಟಕಿ, ಸ್ವಿಚ್ ಬೋರ್ಡ್, ಹಾಗೂ ಮನೆಯ ಗೋಡೆಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.