Ad Widget

ಲೋಕಸಭಾ ಚುನಾವಣೆ ದಕ್ಷಿಣ ಕನ್ನಡದಲ್ಲಿ ಮತ್ತೆ ಅಂತರ ಹೆಚ್ಚಿಸಿಕೊಂಡ ಚೌಟ

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟರವರು ಮೊದಲ ಸುತ್ತಿನಿಂದಲೇ ಅಂತರ ಕಾಯ್ದುಕೊಂಡು ಬಂದಿದ್ದು ಇದೀಗ ತಮ್ಮ ಅಂತರವನ್ನು ಪ್ರತಿಸ್ಪರ್ಧಿ ಪದ್ಮರಾಜ್ ವಿರುದ್ಧ ಐವತ್ತು ಸಾವಿರ ಹೆಚ್ಚಿಸಿಕೊಂಡಿದ್ದು ಗೆಲುವಿನ ನಗೆ ಬೀರುವುದು ನಿಚ್ಚಳವಾಗಿದೆ.

ಲೋಕಸಭಾ ಚುನಾವಣೆ ಫಲಿತಾಂಶ : ಎನ್ ಡಿ ಎ ಗೆ ತೀವ್ರ ಸ್ಪರ್ಧೆ ನೀಡುತ್ತಿರುವ ಇಂಡಿಯಾ

ಲೋಕಸಭಾ ಚುನಾವಣೆಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಇತ್ತ ಎಕ್ಸಿಟ್ ಪೋಲ್ ಗಳಿಗೆ  ಒಂದು ರೀತಿಯಲ್ಲಿ ವ್ಯತಿರಿಕ್ತ ಫಲಿತಾಂಶ ಬರುತ್ತಿದ್ದು ಉತ್ತರ ಪ್ರದೇಶ, ಹರಿಯಾಣ, ತೆಲಂಗಾಣ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ ಅಲ್ಲದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊದಲ ಸುತ್ತಿನಿಂದಲೇ ಹಿನ್ನಡೆ ಅನುಭವಿಸುತ್ತಿದ್ದಾರೆ. ಕೇರಳದಲ್ಲಿ ಒಂದು ಖಾತೆಯನ್ನು ಬಿಜೆಪಿ ತೆರೆಯುವ...
Ad Widget

ಕೈಕಂಬ: ಬಾಲಡ್ಕದಲ್ಲಿ ಸಿಡಿಲು ಬಡಿದು ಹಾನಿ!

ಮನೆಗೆ  ಸಿಡಿಲು ಬಡಿದು ಹಾನಿ ಸಂಭವಿಸಿದ ಘಟನೆ  ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕದಲ್ಲಿ ನಿನ್ನೆ ಸಂಜೆ  ಜೂನ್ (3ರಂದು) ಸಂಭವಿಸಿದೆ. ಬಿಳಿನೆಲೆ ಗ್ರಾಮದ ಕೈಕಂಬ ಬಾಲಡ್ಕ ಯಶೋಧರರವರ ಮನೆಗೆ  ಸಿಡಿಲು ಬಡಿದಿದ್ದು, ಪರಿಣಾಮವಾಗಿ ಮನೆಯ ಕಿಟಕಿ,  ಸ್ವಿಚ್ ಬೋರ್ಡ್, ಹಾಗೂ ಮನೆಯ ಗೋಡೆಗೆ ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ನೆಕ್ರಕಜೆ: ಮನೆಗೆ ಮರ ಬಿದ್ದು ಹಾನಿ!

ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪಂಬೆತ್ತಾಡಿ ಗ್ರಾಮ ನೆಕ್ರಕಜೆ ರವಿ ಪ್ರಸಾದ್ ಅವರ  ಮನೆಗೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಡೆದಿದೆ.   ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಗೀತಾ ಗುಡ್ಡೆಮನೆ ಅವರಿಗೆ ಪಿ ಎಚ್ ಡಿ ಪದವಿ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಡಾ.ಸಿ.ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಗೀತಾ ಜಿ. ಗುಡ್ಡೆಮನೆ ಅವರು ಮಂಡಿಸಿದ "Performance of Female Kabaddi Players in Relation to Selected Psychological and Psychomotor Variables" ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು.‌ ದೈಹಿಕ ಶಿಕ್ಷಣ ವಿಷಯದಲ್ಲಿ ಇವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್.ಡಿ ಪದವಿ ನೀಡಿದೆ. ಇವರು...

ಇಂದು ಲೋಕಸಭಾ ಚುನಾವಣಾ ಫಲಿತಾಂಶ – ದ.ಕ. ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

ಇಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು ಮತ ಎಣಿಕೆ ಆರಂಭಗೊಂಡಿದೆ.  ದ.ಕ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ. ಇದೀಗ 9000 ಮತಗಳ ಮುನ್ನಡೆ ಯಲ್ಲಿದ್ದಾರೆ.
error: Content is protected !!