- Friday
- April 4th, 2025

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಚಾರದಲ್ಲಿ ಗೆಲುವು ನಿರೀಕ್ಷಿಸಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿದ್ದು, ಇದೀಗ ಎಣೆಸಿದ 10 ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಭಾರಿ ಅಂತರವನ್ನು ಕಾಯ್ದುಕೊಂಡಿದ್ದಾರೆ. ಕೊನೆಯ ಸುತ್ತು ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಲೆಕ್ಕಚಾರದಂತೆ ಎರಡು ಲಕ್ಷವನ್ನು ದಾಟಿದರು ಅಚ್ಚರಿಪಡಬೇಕಿಲ್ಲ

ಉಡುಪಿ :ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ರವರು ಒಂದು ಲಕ್ಷದ ನಲುವತ್ತೆಲು ಸಾವಿರದ ಎಳುನೂರ ಅರುವತ್ತಾರು ಮತಗಳ ಅಂತರವನ್ನು ಕಾಯ್ದುಕೊಂಡು ಗೆಲುವಿನ ನಗೆ ಬೀರಿದು. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ವಿರುದ್ದ ತಮ್ಮ ಗೆಲುವನ್ನು ಪಡೆದುಕೊಂಡರು .

ಸ್ವಾತಂತ್ರ್ಯದ ಬಳಿಕ ಕೇರಳ ರಾಜ್ಯದ ಇತಿಹಾಸದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ತನ್ನ ನೆಲೆಯನ್ನು ಕಾಣಲು ಅಸಾಧ್ಯವಾಗಿತ್ತು. ಆದರೆ 2024 ರ ಲೋಕಸಭಾ ಚುನಾವಣೆಯಲ್ಲಿ ಖ್ಯಾತ ಚಿತ್ರನಟ ಬಿಜೆಪಿ ನಾಯಕ ಸುರೇಶ್ ಗೋಪಿ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇದೀಗ ಗೆಲುವಿನ ಸನಿಹದಲ್ಲಿದ್ದು ಮೊದಲ ಸುತ್ತಿನಿಂದ ಈ ಕ್ಷಣದವರೆಗೆ ಮೊದಲ ಸ್ಥಾನದಲ್ಲಿಯೇ ಮುಂದಡಿಯಿಡುತ್ತಿದ್ದು ಗೆಲವು ನಿಚ್ಚಳವಾಗಿ...

ಉಡುಪಿ :ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ರವರು ಒಂದು ಲಕ್ಷದ ಹದಿನೇಳು ಸಾವಿರದ ಏಳುನೂರು ತೊಂಬತ್ತು ಮತಗಳ ಅಂತರವನ್ನು ಕಾಯ್ದುಕೊಂಡು ಗೆಲುವಿನ ಸನಿಹದಲ್ಲಿ ಕಾಣಿಸುತ್ತಿದಾರೆ.

ಮಂಗಳೂರು: ಮಂಗಳೂರು ಲೋಕಸಭಾ ಕ್ಷಣದಲ್ಲಿ ಜಾತಿವಾರು ಮತಗಳಿಕೆಗೆ ಮುಂದಾಗಿದ್ದ ಕಾಂಗ್ರೆಸ್ ಮಕಾಡೆ ಮಲಗುವ ಸಾಧ್ಯತೆ ಕಾಣಿಸುತ್ತಿದ್ದು ಇದೀಗ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರಿಂದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟರವರು ಅತೀ ಹೆಚ್ಚಿನ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದೀಗ ಲಕ್ಷದ ಸಮೀಪಕ್ಕೆ ಬಂದಿದ್ದು ಗೆಲುವಿನ ನಗೆ ಬೀರಬಹುದು ಎಂದು ಈಗಿನ ಲೀಡ್ ಪ್ರಕಾರ ನಿರೀಕ್ಷಿಸಬಹುದಾಗಿದೆ.

ಹಾಸನ: ಹಾಸನ ಲೋಕಸಭಾ ಅಭ್ಯರ್ಥಿಗಳಲ್ಲಿ ಹಾವು ಏಣಿ ಆಟ ಮುಂದುವರೆದಿದ್ದು ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇದೀಗ ಎಸ್ ಐ ಟಿ ವಶದಲ್ಲಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರ ಫೈಟ್ ನಡೆಯುತ್ತಿದ್ದು ಇಲ್ಲಿ ಭಾರಿ ಕುತೂಹಲ ಮೂಡಿಸಿದ್ದು ಹಾವು ಏಣಿ ಆಟ ಮುಂದುವರೆದಿದೆ.

ಶಿವಮೊಗ್ಗ: ಶಿವಮೊಗ್ಗದಲ್ಲಿ ಭಾರಿ ಕುತೂಹಲ ಮೂಡಿಸಿ ಈಶ್ವರಪ್ಪ ಸ್ಪರ್ಧೆ ಯಾವುದೇ ಪರಿಣಾಮ ಬೀರಿದಂತಿಲ್ಲ. ಇದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮುನ್ನಡೆ ಸಾಧಿಸುತ್ತಿದ್ದು ಇಲ್ಲಿ ಗೀತಾ ಶಿವರಾಜ್ ಕುಮಾರ್ ಎರಡನೇ ಸ್ಥಾನದಲ್ಲಿದ್ದು ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು ಮತ ಎಣಿಕೆ ನಡೆಯುತ್ತಿದ್ದು ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ 85 ಸಾವಿರ ಮತಗಳ ಮುನ್ನಡೆಯಲ್ಲಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ರವರ ಆಡಳಿದ ವಿರುದ್ದವಾದ ಅಲೆ ಕಾಣಿಸುತ್ತಿದ್ದು ಕನಕಪುರ ಬಂಡೆಯನ್ನು ಒಡೆಯುವಲ್ಲಿ ಇದೀಗ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಯಶಸ್ವಿಯಾಗಿದ್ದು, ಸುಮಾರು ಒಂದು ಲಕ್ಷದ ಅಧಿಕ ಮತಗಳನ್ನು ಪಡೆದಿದ್ದು ಗೆಲುವಿನ ಸಮೀಪಕ್ಕೆ ದಾಪುಗಾಲು ಇಡುತ್ತಿದ್ದಾರೆ.

All posts loaded
No more posts