
ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯು ನಡೆದು ಬರೋಬ್ಬರಿ 38 ದಿನಗಳ ಬಳಿಕ ಪಲಿತಾಂಶ ಪ್ರಕಟವಾಗಿದ್ದು ಈ ಪಲಿತಾಂಶದಲ್ಲಿ ಬಿಜೆಪಿ ಮತ್ತೆ ಮಂಗಳೂರನ್ನು ಕೇಸರಿಯ ಭದ್ರಕೋಟೆ ಎಂದು ಸಾಬೀತು ಪಡಿಸಿದ್ದು ತಾಲೂಕು ಮಾರು ಪಡೆದ ಮತಗಳ ವಿವರ ಈ ಕೆಳಗಿಂತಿದೆ .
ಬೆಳ್ತಂಡಗಿಯಲ್ಲಿ ಬಿಜೆಪಿಯು 101408 ಕಾಂಗ್ರೆಸ್ 78101 ಮತಗಳು , ಮುಡಬಿದ್ರೆಯಲ್ಲಿ ಬಿಜೆಪಿ 92496 ಪಡೆದರೆ ಕಾಂಗ್ರೆಸ್ 64308 , ಮಂಗಳೂರು ಉತ್ತರ 108137 ಬಿಜೆಪಿ ಪ್ರತಿಸ್ಪರ್ಧಿ ಕಾಂಗ್ರೆಸ್ 76716 , ಮಂಗಳೂರು ದಕ್ಷಿಣ 95531 ಬಿಜೆಪಿ ಕಾಂಗ್ರೆಸ್ 71187 , ಮಂಗಳೂರು (ಉಳ್ಳಾಲ) ದಲ್ಲಿ ಬಿಜೆಪಿ 64870 ಹಾಗೂ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಭಾರಿ ಮುನ್ನಡೆಯೊಂದಿಗೆ 97933 ಮತಗಳು ಬಾಚಿಕೊಂಡಿತು ನಂತರದ ಕ್ಷೇತ್ರಗಳಲ್ಲಿ ಬಂಟ್ವಾಳ 94679 ಬಿಜೆಪಿ ಪಡೆದು ಕಾಂಗ್ರೆಸ್ 88686 ಮತಗಳನ್ನು ಪಡೆಯಿತು . ಇತ್ತ ಪುತ್ತೂರು ಕಾಂಗ್ರೆಸ್ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಕ್ಷಣದಲ್ಲಿ ಬಿಜೆಪಿ 100247 ಮತಗಳನ್ನು ಪಡೆದರೆ ಕಾಂಗ್ರೆಸ್ 71557 ಮತಗಳನ್ನು ಗಳಿಸಿತು ಸುಳ್ಯದಲ್ಲಿ ಈ ಹಿಂದಿನಂತೆಯೇ ಬಿಜೆಪಿ ಭದ್ರ ಕೋಟೆಯಾಗಿದ್ದು ಇಲ್ಲಿ ಈ ಭಾರಿಯು ಬಿಜೆಪಿ 102762 ಮತಗಳನ್ನು ಪಡೆದರೆ ಕಾಂಗ್ರೆಸ್ ಅಲ್ಪ ಮತಗಳಿಕೆಯನ್ನು ಹೆಚ್ಚಿಸಿ 63615 ಮತಗಳನ್ನು ಪಡೆಯಿತು ಅಂತಿಮವಾಗಿ ಈ ಎಲ್ಲಾ ಮತಗಳು ಮತ್ತು ಪೋಸ್ಟಲ್ ಮತಗಳ ಪ್ರಕಾರ ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ದಕ್ಷಿಣ ಕನ್ನಡದ ನೂತನ ಸಂಸದರಾಗಿ 1,49,208 ಮತಗಳ ಅಂತರದಿಂದ ಆಯ್ಕೆಯಾಗಿ ಸಂಸದರಾಗಿಗದ್ದುಗೆ ಏರುವ ಮೂಲಕ ಮತ್ತೊಮ್ಮೆ ಕರಾವಳಿ ಹಿಂದುತ್ವದ ಭದ್ರಕೋಟೆಯಾಗಿ ಕೇಸರಿ ಪತಾಕೆ ರಾರಾಜಿಸಿದೆ.
