
ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಕಲ್ಲೆಂಬಿ ಮಾಧವ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.ಇಂದು ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರೆನ್ನಲಾಗಿದೆ.
ಮೃತರು ಪತ್ನಿ ಶ್ರೀಮತಿ ನಾಗವೇಣಿ, ಪುತ್ರರಾದ ಜೀವನ್, ಪುನೀತ್ ಮತ್ತು ಪುತ್ರಿ ಶ್ರೀಮತಿ ಪ್ರೀತಿ, ಅಳಿಯ ಹಾಗೂ ಸಹೋದರರಾದ ಯತೀಶ್ ಕಲ್ಲೆಂಬಿ, ಸತೀಶ್ಚಂದ್ರ ಕಲ್ಲೆಂಬಿ, ಸಹೋದರಿಯರಾದ ಹೇಮಲತಾ, ಪದ್ಮಾವತಿ, ಪ್ರೇಮಲತಾ, ಹರಿಣಾಕ್ಷಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರಾಗಿ, ಆಲೆಟ್ಟಿ ಪಂಚಾಯತ್ ಸದಸ್ಯರಾಗಿ ಹಾಗೂ ಕಲ್ಲೆಂಬಿ ಕುಟುಂಬದ ಆಡಳೆದಾರರಾಗಿಯೂ ಸೇವೆ ಸಲ್ಲಿಸಿದ್ದರು.