
ವಿಟ್ಲ ದಲ್ಲಿ ಜೂ.02 ರಂದು ನಡೆದ ಜೇಸಿಐ ವಲಯ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಹಲವು ಪ್ರಶಸ್ತಿ ಲಭಿಸಿದೆ. ಘಟಕಾಧ್ಯಕ್ಷ ಗುರುಪ್ರಸಾದ್ ನಾಯಕ್ ಇವರಿಗೆ ಯುವ ರತ್ನ ಪ್ರಶಸ್ತಿ,ರಜತ ಸಿಂಚನ ಪ್ರಶಸ್ತಿ, ಜೆಸಿ ಬೆಳ್ಳಿ ತಾರೆ ಪ್ರಶಸ್ತಿ, ಔಟ್ ಸ್ಟ್ಯಾಂಡಿಂಗ್ ಲೋ ಪ್ರೆಸಿಡೆಂಟ್ ರನ್ನರ್ ಪ್ರಶಸ್ತಿ ,ಜೇಸಿ ಮಿನುಗುತಾರೆ ಪ್ರಶಸ್ತಿ ಲಭಿಸಿದೆ. ಸುಳ್ಯ ಘಟಕಕ್ಕೆ ಸಿಲ್ವರ್ ಲೋ ಪ್ರಶಸ್ತಿ, ಯುವ ದಿನಾಚರಣೆ, ಹಸಿರು ಸಮೃದ್ಧಿಯೊಂದಿಗೆ ಕಾರ್ಯಕ್ರಮ, ಚುನಾವಣೆ ಜಾಗೃತಿ, ಸೆಲ್ಯೂಟ್ ದೀ ಸ್ಟಾರ್ ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳಎನ್ನು ನಡೆಸುವ ಮೂಲಕ ಸುಳ್ಯದಲ್ಲಿ ಜೆಸಿಐ ಸುಳ್ಯ ಪಯಸ್ವಿನಿ ಜನಮನ್ನಣೆಗೆ ಪಾತ್ರವಾಗಿದೆ. ಗುರುಪ್ರಸಾದ್ ನಾಯಕ್ ಹಾಗೂ ಶಶ್ಮಿ ಭಟ್ ಈ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಜೇಸಿ ಅಶೋಕ್ ಚೂಂತಾರ್, ಶಶ್ಮಿ ಭಟ್ ಅಜ್ಜಾವರ, ನವೀನ್ ಅಜ್ಜಾವರ , ಗುರುರಾಜ್ ಅಜ್ಜಾವರ , ಅಶ್ವಿನಿ, ಸುರೇಶ್ ಕಾಮತ್. ಗೀತಾಂಜಲಿ ಅಜ್ಜಾವರ ಮತ್ತು ಇತರ ಸದಸ್ಯರು ಭಾಗವಹಿಸಿದ್ದರು.