
ಕಡಬ ತಾಲೂಕಿನ ಕೊಂಬಾರು ಸ.ಉ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ 34 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿರುವ ಚಿದಾನಂದ ಗೌಡರವರು ಮೇ.31ರಂದು ನಿವೃತ್ತರಾದರು. ಕಡಬ ತಾಲೂಕಿನ ಕೊಂಬಾರು ಗ್ರಾಮದ ಶ್ರೀಯುತ ಶಿವಣ್ಣ ಗೌಡ ಹಾಗೂ ಶ್ರೀಮತಿ ವೆಂಕಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಶ್ರೀ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಶಿಕ್ಷಕ ತರಬೇತಿಯನ್ನು ಶಿಕ್ಷಕರ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 06.02.1990 ರಲ್ಲಿ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಸ.ಕಿ.ಪ್ರಾ.ಶಾಲೆ ಅಡಿಂಜೆ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ 10 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.