
ನೈರುತ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರ್ ಮಂಜುನಾಥ್, ಹಾಗೂ ಡಾ| ಕೆ.ಕೆ. ಮಂಜುನಾಥ್ ಕುಮಾರ್ ರ ಪರವಾಗಿ ಪಯಸ್ವಿನಿ ಹೈ ಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್, ಹಿರಿಯ ಪ್ರಾಥಮಿಕ ಶಾಲೆ ಪೇರಾಲು , ಹೈ ಸ್ಕೂಲ್ ಅಜ್ಜಾವಾರ, ಹಿರಿಯ ಪ್ರಾಥಮಿಕ ಶಾಲೆ ಅಡ್ಪoಗಾಯ, ಅಜ್ಜಾವಾರ ಶಾಲೆ, ಹೈ ಸ್ಕೂಲ್ ಆಲೆಟ್ಟಿ, ಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಎಲ್ಲ ಮತದಾರರನ್ನು ಸಂಪರ್ಕಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ ಮಾಡಿದರು. ಶಿಕ್ಷಕರ ಮತ್ತು ಪದವೀದಾರರ ಸಮಸ್ಯೆಗೆ ಪರಿಹಾರ, ನಿರುದ್ಯೋಗ ಭತ್ಯೆ ನೀಡುತ್ತಿದ್ದು ಇದು ಕಾಂಗ್ರೆಸ್ ನ ಕೊಡುಗೆಯಾಗಿದೆ. ಆದುದರಿಂದ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ .ಕೆಪಿಸಿಸಿ ಸಂಯೋಜಕರು ಸುಳ್ಯ ಬ್ಲಾಕ್ ಚುನಾವಣೆ ಉಸ್ತುವಾರಿ ಪ್ರದೀಪ್ ಕುಮಾರ್ ರೈ ಪಾಂಬಾರ್, ಅರಭಾಷೆ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದ್ಯಸರಾದ ರಂಜಿತ್ ರೈ ಮೇನಾಲ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಹಸೈನಾರ್ ಹಾಜಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ತೀರ್ಥರಾಮ ಜಾಲ್ಸರ್ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಅಬ್ಬಾಸ್ AB, ಮತ್ತಿತರರು ಉಪಸ್ಥಿತರಿದ್ದರು