
ಪ್ರಕೃತಿ ವಿಕೋಪ ಎದುರಿಸಲು ಗೃಹರಕ್ಷಕ ದಳ ಸನ್ನದ್ಧವಾಗಿದ್ದು ಪೂರ್ವ ಸಿದ್ಧತೆಯಿಂದ ಹಾನಿ ಪ್ರಮಾಣವನ್ನು ಕಡಿತಗೊಳಿಸಬಹುದು ಎಂದು ಜಿಲ್ಲಾ ಗೃಹರಕ್ಷಕ ದಳ ಸಮಾಧೇಷ್ಟರಾದ. ಡಾ. ಮುರಳಿ ಮೋಹನ್ ಚೂಂತಾರ್ ಹೇಳಿದರು. ಅವರು ಸುಬ್ರಮಣ್ಯ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಮಳೆಗಾಲ ವಿಪತ್ತು ನಿರ್ವಹಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ವೀಕ್ಷಿಸಿದರು ಹಾಗೂ ಇನ್ನಿತರ ಅಗತ್ಯ ಇರುವ ಪರಿಕರಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ ಸುಬ್ರಮಣ್ಯ ಗೃಹರಕ್ಷಕ ದಳ ಪ್ರಭಾರ ಘಟಕ ಅಧಿಕಾರಿ ಹರಿಶ್ಚಂದ್ರ, ಗೃಹರಕ್ಷಕರಾದ ಸುನಿಲ್,ಸಂಜಯ್,
ನೇತ್ರಾ,ರವಿಚಂದ್ರ,ಪ್ರಕಾಶ್ ಹಾಗಗೂ ಇತರ ಗೃಹರಕ್ಷಕರು ಉಪಸ್ಥಿತರಿದ್ದರು.
