
ನಾಗರಹಾವು ಕಡಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹರಿಹರ ಪಲ್ಲತ್ತಡ್ಕದ ಕಲ್ಲೇಮಠದಲ್ಲಿ ನಡೆದಿದ್ದು, ಕಲ್ಲೇಮಠ ನಿವಾಸಿ ದೇವಮ್ಮ ಎಂಬುವವರು ತಮ್ಮ ಮನೆ ಸಮೀಪದ ಕೊಟ್ಟಿಗೆಯ ಸುತ್ತ ಸ್ವಚ್ಛಗೊಳಿಸುವ ಸಂಧರ್ಭದಲ್ಲಿ ಕೋಳಿ ಕಾಪು ಪರಿಶೀಲಿಸಲು ಕೈ ಹಾಕಿದಾಗ ನಾಗರಹಾವು ಕಡಿದಿದ್ದು, ತಕ್ಷಣವೇ ಅವರನ್ನು ಹಳ್ಳಿ ಮದ್ದಿಗೆ ಕರೆದೊಯ್ದು ಅಲ್ಲಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಹಾವು ಕಡಿತದ ವೇಳೆ ಮನೆಯಲ್ಲಿ ಮೊಮ್ಮಗಳು ಒಬ್ಬರಿದ್ದರೆನ್ನಲಾಗಿದೆ.
ಮೃತರಿಗೆ 67 ವರ್ಷ ವಯಸ್ಸಾಗಿದ್ದು, ಮೃತರು ಪುತ್ರಿಯರಾದ ಸಾವಿತ್ರಿ, ಯಮುನಾ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.
