Ad Widget

ಡಾ.ಪುನೀತ್ ಕುಮಾರ್ ಬೊಳುಗಲ್ಲು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ

ಯುಎಸ್ಎ ಯ ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆದ ಒಂಬತ್ತನೇ ವಾರ್ಷಿಕ ರೀಜನಲ್ ಸ್ಪೂಡೆಂಟ್ ಸ್ಕಾಲರ್ಸ್ ಫೋರಮ್ ನಲ್ಲಿ ಡಾ. ಪುನೀತ್ ಕುಮಾ‌ರ್ ಬೊಳುಗಲ್ಲುರವರು ಪ್ರಸ್ತುತಪಡಿಸಿದ ” Optimizing Forensic Workflows: Crime Scene Documentation With Image Stiching Software” ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ ಲಭಿಸಿದೆ.

. . . . . . . . .

ಯುಎಸ್‌ಎ ಯ ಅಲ್ಕಾರ್ನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಪೂರೈಸಿರುವ ಇವರು, ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದರು.

. . . . . . .

ಹಲವಾರು ಸಮ್ಮೇಳನಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿ ಎಂಟು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಲ್ಲದೆ ಅನೇಕ ವಿದ್ಯಾರ್ಥಿಗಳಿಗೂ ಇವರು ಮಾರ್ಗದರ್ಶಕರಾಗಿದ್ದಾರೆ.

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ, ಬೆಂಗಳೂರಿನ ಬಿಎಂಸಿ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡಿದ ಬಳಿಕ ಇದೀಗ ಎಂಎಸ್ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಇವರು ಸಂಪಾಜೆ ಗ್ರಾಮದ ಬೊಳುಗಲ್ಲು ಪದ್ಮಯ್ಯ ಬಿ.ಆರ್.  ಹಾಗೂ ಶಾರದಾ ದಂಪತಿಗಳ ಪುತ್ರ.

ಇವರ ಪತ್ನಿ ಶ್ರೀಮತಿ ದೀಪಿಕಾ ನ್ಯಾಚುರೋಪಥಿ ವೈದ್ಯರಾಗಿ (ಕನ್ಸಲ್ವೆಂಟ್) ಯುಎಸ್‌ಎಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading