- Wednesday
- April 2nd, 2025

ಮಂಗಳೂರು: ರಜೆಯಲ್ಲಿಯೂ ತಮ್ಮ ಸಮಯವನ್ನು ಬಿಡುವುಗೊಳಿಸಿ ಕಾರ್ಯಾಗಾರದಲ್ಲಿ ಉಪನ್ಯಾಸಕರು ಪಾಲ್ಗೊಂಡಿರುವುದು ಶ್ಲಾಘನೀಯ. ಇಂತಹ ಉಪನ್ಯಾಸಕರ ಕಾರ್ಯತತ್ಪರ ಕರ್ತವ್ಯವು ಜಿಲ್ಲೆಯ ದ್ವಿತೀಯ ಪಿಯುಸಿಯ ಫಲಿತಾಂಶ ಉನ್ನತ ಮಟ್ಟಕ್ಕೆ ಏರಿಕೆಯಾಗಲು ಭೂಷಣವಾಗಿದೆ.ಉಪನ್ಯಾಸಕರ ನಿಷ್ಠೆಯ ಶ್ರಮ ವಾರ್ಷಿಕ ಪರೀಕ್ಷಾ ಫಲಿತಾಂಶ ಉನ್ನತಿಗೆ ಅಡಿಗಲ್ಲಾಗಿದೆ.ವಿದ್ಯಾರ್ಥಿಗಳ ಭವಿಷ್ಯದ ಔನತ್ಯಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ಪಡೆಯಲು ಇಂತಹ ಕಾರ್ಯಾಗಾರಗಳು ಬುನಾದಿಯಾಗುತ್ತದೆ ಎಂದು...

ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಿಳಿನೆಲೆಯ ಚೇರು ನಿವಾಸಿ ನಾರಾಯಣ ಗೌಡ ಕಳಿಗೆ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಅವರ ಸ್ವಗೃಹದಲ್ಲಿ ನಿಧನರಾದರು. 2023 ಸೆಪ್ಟೆಂಬರ್ ನಲ್ಲಿ ಬ್ರೈನ್ ಸ್ಟ್ರೋಕ್ ಆಗಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮೃತರು ಪತ್ನಿ ಆರೋಗ್ಯ ಸಹಾಯಕಿ ಮಾಲತಿ, ಒರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಯುಎಸ್ಎ ಯ ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆದ ಒಂಬತ್ತನೇ ವಾರ್ಷಿಕ ರೀಜನಲ್ ಸ್ಪೂಡೆಂಟ್ ಸ್ಕಾಲರ್ಸ್ ಫೋರಮ್ ನಲ್ಲಿ ಡಾ. ಪುನೀತ್ ಕುಮಾರ್ ಬೊಳುಗಲ್ಲುರವರು ಪ್ರಸ್ತುತಪಡಿಸಿದ " Optimizing Forensic Workflows: Crime Scene Documentation With Image Stiching Software" ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಯುಎಸ್‌ಎ ಯ ಅಲ್ಕಾರ್ನ್ ಸ್ಟೇಟ್...
ಪೇರಾಲು ಕುಕ್ಕೇಟಿ ಬಳಿ ಬೈಕ್ ಸ್ಕಿಡ್ ಆಗಿ ಮೆಸ್ಕಾಂ ಪವರ್ ಮ್ಯಾನ್ ಗಳಿಗೆ ಅಲ್ಪಸ್ವಲ್ಪ ಗಾಯಗಳಾದ ಘಟನೆ ಇಂದು ನಡೆದಿದೆ. ಲೈನ್ ದುರಸ್ತಿ ಮಾಡಿ ಬರುತ್ತಿರುವಾಗ ಬೈಕ್ ಸ್ಕಿಡ್ ಆದ ಪರಿಣಾಮ ಪವರ್ ಮ್ಯಾನ್ ಗಳಾದ ಸಚಿನ್ ಮತ್ತು ಸದರ್ಶನ್ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಸಂಜೆ ಬೀಸಿದ ಭಾರಿ ಗಾಳಿ ಮಳೆಗೆ ಅರಂತೋಡು ಅಡ್ತಲೆ ರಸ್ತೆಯ ಹಾಸ್ಪಾರೆ ಎಂಬಲ್ಲಿ ಮರಗಳು ಮುರಿದು ಬಿದ್ದಿದೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಒಡಬಾಯಿ ಸಮೀಪ ಮೆಸ್ಕಾಂ 24*7 ಸರ್ವೀಸ್ ಜೀಪಿಗೆ ಖಾಸಗಿ ಬಸ್ ಡಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಒಡಬಾಯಿ ಬಳಿ ಕಾಸಗೋಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಖಾಸಗಿ ಬಸ್ ಮೆಸ್ಕಾಂ ಸುಳ್ಯ ಶಾಖೆಯ ಜೀಪಿಗೆ ಡಿಕ್ಕಿ ಹೊಡೆದಿದೆ. ಜೀಪಿನ ಹಿಂಭಾಗ ಜಖಂಗೊಂಡಿದೆ. ಬಸ್ ನ ಮುಂಭಾಗದ ಗಾಜು ಒಡೆದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ...

ನಾಗರಹಾವು ಕಡಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹರಿಹರ ಪಲ್ಲತ್ತಡ್ಕದ ಕಲ್ಲೇಮಠದಲ್ಲಿ ನಡೆದಿದ್ದು, ಕಲ್ಲೇಮಠ ನಿವಾಸಿ ದೇವಮ್ಮ ಎಂಬುವವರು ತಮ್ಮ ಮನೆ ಸಮೀಪದ ಕೊಟ್ಟಿಗೆಯ ಸುತ್ತ ಸ್ವಚ್ಛಗೊಳಿಸುವ ಸಂಧರ್ಭದಲ್ಲಿ ಕೋಳಿ ಕಾಪು ಪರಿಶೀಲಿಸಲು ಕೈ ಹಾಕಿದಾಗ ನಾಗರಹಾವು ಕಡಿದಿದ್ದು, ತಕ್ಷಣವೇ ಅವರನ್ನು ಹಳ್ಳಿ ಮದ್ದಿಗೆ ಕರೆದೊಯ್ದು ಅಲ್ಲಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ...

ಪ್ರಕೃತಿ ವಿಕೋಪ ಎದುರಿಸಲು ಗೃಹರಕ್ಷಕ ದಳ ಸನ್ನದ್ಧವಾಗಿದ್ದು ಪೂರ್ವ ಸಿದ್ಧತೆಯಿಂದ ಹಾನಿ ಪ್ರಮಾಣವನ್ನು ಕಡಿತಗೊಳಿಸಬಹುದು ಎಂದು ಜಿಲ್ಲಾ ಗೃಹರಕ್ಷಕ ದಳ ಸಮಾಧೇಷ್ಟರಾದ. ಡಾ. ಮುರಳಿ ಮೋಹನ್ ಚೂಂತಾರ್ ಹೇಳಿದರು. ಅವರು ಸುಬ್ರಮಣ್ಯ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಮಳೆಗಾಲ ವಿಪತ್ತು ನಿರ್ವಹಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ವೀಕ್ಷಿಸಿದರು...

ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಕೃಷ್ಣಮೂರ್ತಿಯವರ ವಯೋ ನಿವೃತ್ತಿಯಿಂದ ತೆರವಾದ ಸ್ಥಾನದ ಪ್ರಭಾರವನ್ನು, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನ ಹಾಗೂ ಆಡಳಿತ ಮಂಡಳಿಯ ಸೂಚನೆಯಂತೆ ವಿದ್ಯಾಬೋಧಿನೀ ಪ್ರೌಢಶಾಲೆಯ ಸಹಶಿಕ್ಷಕರಾದ ಉದಯಕುಮಾರ ರೈ ಎಸ್ ರವರು ವಹಿಸಿಕೊಂಡರು. ಈ ಸಂದರ್ಭ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕ ಪಿ ಜಿ ಎಸ್ ಎನ್ ಪ್ರಸಾದ್, ವಿದ್ಯಾಬೋಧಿನೀ...

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.ಕಾಲೇಜಿನ ಸಂಚಾಲಕರಾದ ಶ್ರೀ ಕೆ ಆರ್ ಗಂಗಾಧರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನವನ್ನು ಬಳಸಿಕೊಂಡು ಅತ್ಯುತ್ತಮ ವ್ಯಕ್ತಿತ್ವವುಳ್ಳ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಅಧ್ಯಕ್ಷತೆ ವಹಿಸಿ, ಕಾಲೇಜಿನ...

All posts loaded
No more posts