
ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಬೊಂಬ ಬೆಳ್ಚಪ್ಪಾಡ (88) ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೀರ್ಘಕಾಲದಿಂದ ಅನಾರೋಗ್ಯದಿಂದಿದ್ದ ಅವರು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರಬಹುದು ಎನ್ನಲಾಗಿದೆ. ಮೃತರು ಪತ್ನಿ ನಾರಾಯಣಿ, ಪುತ್ರರಾದ ರಾಘವ ,ಕುಂಞಿರಾಮ, ಕೃಷ್ಣ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.
