ಸುಳ್ಯ ತಾಲೂಕಿನ ನಾನಾ ಭಾಗಗಳಲ್ಲಿ ಕಳೆದ ಕೆಲ ವರ್ಷಗಳಿಂದ ಪ್ರಕೃತಿ ವಿಕೋಪಗಳು ನಡೆಯುತ್ತಿದ್ದು ಪ್ರಕೃತಿಯು ಮುನಿಸಿದ ಹಾಗೆ ಕಂಡು ಬರುತ್ತಿದ್ದವು. ಇದೀಗ ಪುನಃ ಮುಂಗಾರು ಆಗಮನದ ನಿರೀಕ್ಷೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಆಡಳಿತ ಪ್ರಕೃತಿ ವಿಕೋಪ ಎದುರಿಸಲು ಸಿದ್ಧತೆ ಆರಂಭಿಸಿದೆ.
ಸುಳ್ಯ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಮಟ್ಟದ ಸಮಿತಿಗಳನ್ನು ರಚಿಸಲು ಸೂಚಿಸಿದ್ದು ಅಲ್ಲದೆ ಪ್ರತಿ ವಾರ್ಡ್ ವಾರು ಸ್ಥಳೀಯ ಸದಸ್ಯರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸೂಚಿಸಲಾಗಿದೆ ಅಲ್ಲದೇ ತುರ್ತು ಕಾರ್ಯನಿರ್ವಹಿಸಲು ಮರಗಳು ಬಿದ್ದಾಗ ಮರಗಳನ್ನು ತೆರವುಗೊಳಿಸಲು ಮರ ಕಟಾವು ಯಂತ್ರ , ಜೆಸಿಬಿ , ಮುಳುಗು ತಜ್ಞರು , ಬೋಟ್ , ಕಾಳಜಿ ಕೇಂದ್ರ ಸ್ಥಾಪನೆ ಸೇರಿದಂತೆ ಇತರೆ ಅಗತ್ಯ ಕ್ರಮಗಳು ಮತ್ತು ಪರಿಕರಗಳು ಹಾಗೂ ಅಗತ್ಯವಾಗಿ ಕೆಲ ನುರಿತ ತಜ್ಞರನ್ನು ಸಮಿಗೆ ಸೇರಿಸಲು ಆದೇಶ ನೀಡಿದ್ದು ಇವುಗಳನ್ನು ಚಾಚುತಪ್ಪದೇ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಇದರ ಕುರಿತಾಗಿ ತಾಲೂಕುವಾರು ಪರಿಶೀಲನೆ ಮಾಡಲಾಗಿದೆ ಎಂದು ತಾ ಪಂ ಇಒ ಪರಮೇಶ್ವರ್ ತಿಳಿಸಿದರು.
ಕೊಲ್ಲಮೊಗ್ರ ಕಲ್ಮಕಾರು ಹಾಗೂ ಕಳೆದ ಭಾರಿ ಸಮಸ್ಯೆ ಉದ್ಭವಿಸಿದ ಸ್ಥಳಗಳಿಗೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ಪರಿಶೀಲನೆ
ಕಳೆದ ಭಾರಿ ಪ್ರಾಕೃತಿಕ ವಿಕೋಪದಲ್ಲಿ ಸಮಸ್ಯೆಗಳನ್ನು ಎದುರಿಸಿದ ಸ್ಥಳಗಳಿಗೆ ಇಒ ಪರಮೇಶ್ವರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿದರಲ್ಲದೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ತಾಲೂಕು ಕಛೇರಿಯಲ್ಲಿಯಲ್ಲಿ ತುರ್ತು ಸಹಾಯವಾಣಿ ಸಂಖ್ಯೆ ಕಾರ್ಯ ನಿರ್ವಹಿಸಲಿದ್ದು ಪ್ರತಿ ಗ್ರಾಮಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ . ಅಲ್ಲದೇ ಪ್ರತಿ ಗ್ರಾಮ ಮಟ್ಟದಲ್ಲಿ ವ್ಯಾಟ್ಯಾಪ್ ಗ್ರೂಪ್ ಗಳನ್ನು ರಚನೆ ಮಾಡಿ ತುರ್ತು ಸಂದರ್ಭದಲ್ಲಿ ಕಾರ್ಯಪ್ರವೃತರಾಗಲಿದ್ದಾರೆ. ನೆಟ್ವರ್ಕ್ ಸಮಸ್ಯೆ ಇರುವ ಪ್ರದೇಶಗಳಲ್ಲಿ ಅಧಿಕಾರಿಗಳಿಗೆ ವ್ಯಾಟ್ಯಾಪ್ ಮೂಲಕ ಕರೆ ಮಾಡಬಹುದಾಗಿದೆ.ಅಲ್ಲಿ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರಿಗಳಿಗೆ ಇಂಟರ್ನೆಟ್ ಸೌಲಭ್ಯಗಳು ಲಭ್ಯವಿರಲಿದೆ ಅಲ್ಲದೇ ಅವುಗಳು ಸಾಧ್ಯವಾಗದ ಪ್ರದೇಶಗಳಲ್ಲಿ ಪೋಲಿಸ್ ಇಲಾಖೆಯ ವಾಕಿಟಾಕಿ ಮೂಲಕ ಸಂಪರ್ಕ ಸಾಧಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದಾರೆ .