
ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ಪರವಾಗಿ ಸುಳ್ಯದ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್ ,ಡೆಂಟಲ್ ಕಾಲೇಜ್, ನೆಹರು ಮೆಮೋರಿಯಲ್ ಕಾಲೇಜ್, ಮತ್ತು ಆಯುರ್ವೇದಿಕ್ ಕಾಲೇಜ್, ಸರಕಾರಿ ಜೂನಿಯರ್ ಕಾಲೇಜ್, ಸರಕಾರಿ ಪದವಿ ಪೂರ್ವ ಕಾಲೇಜು, ಕೊಡಿಯಾಲ ಬೈಲು, ಮತ್ತು ಸುಮನಾ ಬೆಳಾರ್ಕರ್,ಮನೆ ಭೇಟಿ ಮಾಡಿ ಮತದಾರರನ್ನು ಸಂಪರ್ಕಿಸಿ ಸುಳ್ಯ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಮತ ಯಾಚಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಮಹಿಳಾ ಮೋರ್ಚಾ ಕಾರ್ಯದರ್ಶಿ ಶಶಿಕಲಾ. ಎ. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪ ಮೇದಪ್ಪ, ಅರಂತೋಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಭಾರತಿ ಉಳುವಾರ್ , ಗ್ರಾಮ ಪಂಚಾಯತ್ ಸದಸ್ಯರಾದ ದಿವ್ಯ ಮಡಪ್ಪಾಡಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸತ್ಯವತಿ ಅಜ್ಜಾವರ, , ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಸುಮಾದರ ಕೆ. ಟಿ .ಉಪಸ್ಥಿತರಿದ್ದರು.
