Ad Widget

ಪ್ರೇತಗಳ ಮದುವೆ ( ಕುಲೆ ಮದಿಮೆ )




ನಮ್ಮ ತುಳುನಾಡು ವೈವಿಧ್ಯಮಯ ಸಂಸ್ಕೃತಿಯ ನಾಡು. ಇಲ್ಲಿ ಹಲವಾರು ರೀತಿಯ ಆಚರಣೆಗಳು, ಆರಾಧನೆಗಳ ಮೂಲ ಸ್ಥಾನವಾಗಿದೆ.ಬೇರೆ ಬೇರೆ ರೀತಿಯ ಸಂಸ್ಕೃತಿ – ಸಂಸ್ಕಾರವನ್ನು ಕಾಣಬಹುದು. ಬೆಮ್ಮರ ಸೃಷ್ಟಿ ತುಳುನಾಡಿನಲ್ಲಿ ಆರಾಧನೆಗೆ ಬಹುಮುಖ್ಯ ಸ್ಥಾನಮಾನವಿದೆ.ಕಳೆದು ಹೋದ ಪೂರ್ವಜರನ್ನು ಆರಾಧಿಸುವ ವಿಶೇಷವಾದ ಆರಾಧನ ಪ್ರಕ್ರಿಯನ್ನು ಕಾಣಬಹುದು. ನ್ಯಾಯಕ್ಕಾಗಿ ಹೋರಾಡಿದ ಅದೆಷ್ಟೋ ವೀರ ನಾಯಕರು ಇಂದು ದೈವತ್ವ ಪಡೆದು ಆರಾಧನೆ ಪಡೆದುಕೊಳ್ಳುತ್ತಿದ್ದಾರೆ.

ಪ್ರೇತಗಳ ಮದುವೆ ( ಕುಲೆ ಮದಿಮೆ )

ತುಳುನಾಡಿನ ಆಟಿ ತಿಂಗಳಲ್ಲಿ ಹೆಚ್ಚಾಗಿ ಪ್ರೇತಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತವೆ. ವಯಸ್ಸಿಗೆ ಬಂದ ಮಕ್ಕಳು ಅಥವಾ ಸಣ್ಣ ಪ್ರಾಯದಲ್ಲೂ ತೀರಿ ಹೋದವರು ಮದುವೆಯ ಪ್ರಾಯಕ್ಕೆ ಬಂದಾಗ ತಮಗೆ ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸುತ್ತವೆ. ತಮ್ಮ ಮನೆಯಲ್ಲಿ ಏನಾದರೂ ವ್ಯತ್ಯಾಸವನ್ನು ಉಂಟುಮಾಡುವುದು ಅಥವಾ ಮನೆಯ ಸದಸ್ಯರ ಮೈ ಮೇಲೆ ಬಂದು ತಮ್ಮ  ಆಸೆಗಳ ಈಡೇರಿಕೆಗಾಗಿ ಒತ್ತಾಯಿಸುತ್ತವೆ. ನಿಜ ಜೀವನದಲ್ಲಿ ಇಲ್ಲದಿದ್ದರೂ ಪರಲೋಕದಲ್ಲಿ ಮದುವೆಯಾಗಿ ಖುಷಿಯಾಗಿರಲಿ ಎಂದು ಇಲ್ಲಿನ ಜನರ ಮನದಾಳದ ಮಾತು.
ತದನಂತರ ತಮ್ಮವರಿಗೆ ಆಗಬೇಕಾದ ಜೋಡಿಯನ್ನು ಹುಡುಕಲು ಮನೆಯವರು ಆರಂಭಿಸುತ್ತಾರೆ . ತಮ್ಮ ಜಾತಿ , ಗೋತ್ರ , ನಕ್ಷತ್ರಗಳು ಸೇರಿ ಕೂಡಿ ಬರುವಂತೆ ಹೆಣ್ಣು ಅಥವಾ ಗಂಡುನ್ನು ಹುಡುಕಲಾಗುತ್ತದೆ. ಎಲ್ಲವು ಸರಿಯಾದ ಮೇಲೆ ಹುಡುಗನ ಕಡೆಯಿಂದ ಮತ್ತು ಹುಡುಗಿಯ ಕಡೆಯಿಂದಲೂ ಮನೆ ನೋಡುವ ಸಂಪ್ರದಾಯ ನಡೆಯುತ್ತದೆ. ನಂತರ ಶುಭ ಕಾರ್ಯಕ್ಕೆ ನಿಗದಿತ ದಿನವನ್ನು ನಿಗದಿ ಪಡಿಸಿ ವಧು ವರರಿಗೆ ಬಟ್ಟೆ , ಪರಿಕರಗಳನ್ನು ಖರೀದಿಸಲಾಗುತ್ತದೆ. ಮದುವೆಯ ಮೊದಲು ನಿಶ್ಚಯ Engagement ನಡೆಸಲಾಗುತ್ತದೆ. ತದನಂತರ ಎರಡೂ ಕಡೆಯ ಸಂಬಂಧಿಕರು ನಿಗದಿ ಪಡಿಸಿದ ದಿನಾಂಕದಂದು ಮದುವೆಯ ತಯಾರಿ ನಡೆಯುತ್ತದೆ. ಮದುವೆಯ ಹಿಂದಿನ ದಿನ ಮದರಂಗಿ ಶಾಸ್ತ್ರ ನಡೆದು ಕುಂಭ ಪೂಜೆಯೂ ನಡೆಯುತ್ತದೆ. ಮಾರನೆ ದಿನ ಗೌಜಿಯ ಗಮ್ಮತ್ತಿನ ಮದುವೆ ಊರಿನ ಸಂಬಂಧಿಕರ ಉಪಸ್ಥಿತಿಯಲ್ಲಿ ಶಾಸ್ತ್ರ ಬದ್ಧವಾಗಿ ನಡೆಯುತ್ತದೆ. ಮದುವೆ ಮಂಟಪದಲ್ಲಿ  ಪಿಂಗಾರ , ಹೂ , ಸೀರೆಯ ಕೊಡುವಿಕೆ , ವೀಳ್ಯ ಶಾಸ್ತ್ರವೂ ನಡೆಯುತ್ತದೆ. ಪ್ರಕೃತಿಯ ಸಿಗುವ ವಸ್ತುಗಳಿಂದ ಮಾಡಿರುವ ಪ್ರತಿಕೃತಿಯ ಹಿಡಿದು ಹಾರ ಬದಲಾವಣೆ , ಕರಿಮಣಿ ಕಟ್ಟುವ ಕ್ರಮ ನಡೆಸಲಾಗಿ , ಶೋಭಾನೆ ಹೇಳಿ ವಧು ವರರಿಗೆ ಆಶೀರ್ವಾದ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೆಣ್ಣು ಮತ್ತು ಗಂಡಿನ ಕಡೆಯವರು ಸಂಬಂಧಿಕರು ಆಗಿದ್ದು , ಪರಸ್ಪರ ಉತ್ತಮ ಬಾಂಧವ್ಯ ಇಟ್ಟುಕೊಂಡಿರುತ್ತರೆ.

ನಮ್ಮ ಆರಾಧನಾ ಪದ್ಧತಿಯಲ್ಲಿ ಕಳೆದು ಹಿರಿಯರನ್ನು ಆರಾಧಿಸುವುದು ಬಹುಮುಖ್ಯ ಆರಾಧನಾ ಪದ್ಧತಿಯಾಗಿದೆ . ಇದಕ್ಕೆ ನೇರ ಉದಾಹರಣೆ : ಪೂರ್ವಜರಿಗೆ ಅಗೇಲು ಸೇವೆ ಹಾಕುವುದು ಮತ್ತು ದೈವರಾಧನೆ.

. . . . . . .

✍️  ‌ ಭಾಸ್ಕರ ಗೌಡ ಜೋಗಿಬೆಟ್ಟು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!