ಸುಳ್ಯ: ಸುಳ್ಯ ಮುಂದಿನ ತಿಂಗಳು ಮಳೆ ಬರುವ ಸಾಧ್ಯತೆಗಳು ಇದ್ದು ಈ ಹಿನ್ನಲೆಯಲ್ಲಿ ಸುಳ್ಯ ತಹಾಶೀಲ್ದಾರ್ ಜಿ ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ಸಭೆ ನಡೆಯಿತು .
ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕಿನ ಪ್ರತಿ ಇಲಾಖಾ ಅಧಿಕಾರಿಗಳು ಜನರಿಂದ ಯಾವುದೇ ದೂರುಗಳು ಬಂದಾಗ ಮತ್ತು ಸಮಸ್ಯೆಗಳು ಆದಾಗ ಕಾಳಜಿ ಕೇಂದ್ರ ತೆರೆದು ಅವರಿಗೆ ಊಟ ವಸತಿ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಬೇಕು ಎಂದು ಪ್ರತಿ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಆಗಿ ನಿರ್ದೇಶನ ನೀಡಿದರು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರ್ ಮತನಾಡುತ್ತಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕೆರೆಗಳು ಮತ್ತು ಭೂ ಕುಸಿತಗಳು ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿ ಅವುಗಳಿಗೆ ಬೇಕಾದ ಪೂರ್ವ ಕ್ರಮಗಳನ್ನು ಕೈಗೊಳ್ಳಬೇಕು ಆಲ್ಲದೇ ಡ್ಯಾಂಗಳು , ಕಿಂಡಿ ಅಣೆಕಟ್ಟುಗಳ ಬಗ್ಗೆ ಮಾಹಿತಿಯನ್ನು ನೀಡಲು ಸಭೆಯಲ್ಲಿ ಸೂಚಿಸಿದರು.
ಯಾವುದೇ ಸಮಸ್ಯೆಗಳು ಇದ್ದರೆ ಗಮನಕ್ಕೆ ತನ್ನಿ , ಸಹಾಯವಾಣಿ ಸಂಖ್ಯೆ ಬಗ್ಗೆ ಮಾಹಿತಿ – ಜಿ ಮಂಜುನಾಥ್ .
ಪ್ರಾಕೃತಿಕ ವಿಕೋಪಕ್ಕೆ ಸಂಭಂದಿಸಿದ ಸಭೆಯಲ್ಲಿ ಮತನಾಡುತ್ತಾ ಪ್ರತಿ ಗ್ರಾಮ ಮಟ್ಟದಲ್ಲಿನ ಜೆಸಿಬಿ , ಮುಳುಗು ತಜ್ಙರು ಹಾಗೆಯೇ ಇತರೆ ಬೇಕಾಗುವ ಸಂಘ ಸಂಘಟನೆಗಳ ಸಂಪರ್ಕ ಸಂಖ್ಯೆಗಳನ್ನು ಈಗಾಗಲೇ ಕ್ರೂಡಿಕರಿಸಿ ನೀಡಬೇಕು ಅಲ್ಲದೇ ತುರ್ತು ಸೇವೆಗಳಾದ ಪೋಲಿಸ್ ಮತ್ತು ಅಗ್ನಿಶಾಮಕ ದಳವು ಕೂಡ ತಮ್ಮ ಕಾರ್ಯ ವ್ಯಾಪ್ತಿಗೆ ಬರುವುದನ್ನು ಈಗಾಗಲೇ ಸಿದ್ದಪಡಿಸಬೇಕು ಎಂದು ಸೂಚಿಸಿದರು . ಪ್ರಾಕೃತಿಕ ವಿಕೋಪ ಸಭೆಯಲ್ಲಿ ತಾಲೂಕು ಸಹಾಯವಾಣಿ ಸಂಪರ್ಕ ಸಂಖ್ಯೆಯನ್ನು ನೀಡಲಾಗಿದ್ದು ಸಂಪರ್ಕ ಸಂಖ್ಯೆಯು ೦೮೨೫೭೨೩೧೨೩೧ ಸಂಪರ್ಕಿಸುವಂತೆ ತಿಳಿಸಿದರು.
ಉಪ ತಹಾಶೀಲ್ದಾರ್ ಮಂಜುನಾಥ್ , ಪಶು ವೈಧ್ಯಾಧಿಕಾರಿ ನಿತಿನ್ ಪ್ರಭು , ಕ್ಷೇತ್ರ ಶಿಕ್ಷಣಧಿಕಾರಿ ಬಿ ಇ ರಮೇಶ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶೈಲಜಾ ಸೇರಿದಂತೆ ತಾಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.