- Monday
- November 25th, 2024
ವಿಕಲಚೇತನರಾಗಿದ್ದರೂ ತನ್ನ ಬರಹಗಳ ಮೂಲಕ ಯುವ ಪತ್ರಕರ್ತನಾಗಿ ಹೊರಹೊಮ್ಮುತ್ತಿರುವ ಯುವ ಪ್ರತಿಭೆ ಅಮರ ಸುದ್ದಿ ವರದಿಗಾರ, ಹವ್ಯಾಸಿ ಬರಹಗಾರ ಉಲ್ಲಾಸ್ ಕಜ್ಜೋಡಿ ಅವರನ್ನು ಸೆ.22 ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಸಹಾಯಧನ ಹಸ್ತಾಂತರಿಸಲಾಯಿತು.ಹರಿಹರ ಪಲ್ಲತ್ತಡ್ಕ ಗ್ರಾಮದ ಉಲ್ಲಾಸ್ ಕಜ್ಜೋಡಿ ಅವರ ಮನೆಗೆ ತೆರಳಿದ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನ ಸದಸ್ಯರು ಅವರನ್ನು...
ಸೆಲ್ಕೋ ಸಂಸ್ಥೆಯ 2022-23 ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಚಿಕ್ಕಮಗಳೂರಿನ ಸಿಲ್ವರ್ ಸ್ಕೈ ರೆಸಾರ್ಟ್ ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸುಳ್ಯ ಶಾಖೆಗೆ ಗ್ರಾಹಕ ಸೇವಾ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿದ್ದು, ಸೆಲ್ಕೋ ಸುಳ್ಯ ಶಾಖಾ ವ್ಯವಸ್ಥಾಪಕರಾದ ಆಶಿಕ್ ಬಸವನಪಾದೆ ಅವರು ಪ್ರಶಸ್ತಿಯನ್ನು ಪಡೆದುಕೊಂಡರು. ಈ ಪ್ರಶಸ್ತಿ ಗ್ರಾಹಕರಿಗೆ ಬ್ಯಾಂಕಿನ ಆರ್ಥಿಕ ಸಹಕಾರದೊಂದಿಗೆ...
ಸಾರ್ವಜನಿಕ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಸೆ.18 ರಿಂದ ಸೆ.20 ರವರೆಗೆ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸಂಭ್ರಮದಿಂದ ನಡೆಯಿತು. ಸೆ.18 ರಂದು ಬೆಳಿಗ್ಗೆ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಿತು. ರಾತ್ರಿ ಶ್ರೀ ಗೌರಿ ದೇವಿಗೆ ಮಹಾಪೂಜೆ...
ಅರಂತೋಡು ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 21/9/23ರಂದು ನಡೆದ ಸುಳ್ಯ ತಾಲೂಕು ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗದಲ್ಲಿ ಪ್ರಥಮ ಹಾಗೂ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟದ ಪಂದ್ಯಾಟವು ಏನೆಕಲ್ ನಲ್ಲಿ ನಡೆಯಲಿದ್ದು, ಈ ಪಂದ್ಯಾಟದಲ್ಲಿ ಬಾಲಕರ ಹಾಗೂ ಬಾಲಕಿಯರ...
ಸುಳ್ಯದ ಟ್ಯಾಕ್ಸಿ ಕಾರು ಕಲ್ಲುಗುಂಡಿಗೆ ತೆರಳಿ ಸುಳ್ಯಕ್ಕೆ ವಾಪಸ್ಸಾಗುವ ವೇಳೆ ಪೆರಾಜೆಯಲ್ಲಿ ಟಯರ್ ಬ್ಲಾಸ್ಟ್ ಆಗಿ ತಡೆಗೋಡೆಗೆ ಗುದ್ದಿದ ಘಟನೆ ಇದೀಗ ವರದಿಯಾಗಿದೆ. ನಂದ ಎಂದು ಬರೆದಿರುವ ಸುಳ್ಯ ಮೂಲದ ಟ್ಯಾಕ್ಸಿ ಕಾರು ಅಪಘಾತವಾಗಿದ್ದು, ಚಾಲಕನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎಚ್ಆರ್ ಮತ್ತು ಪ್ಲೇಸ್ಮೆಂಟ್ ಘಟಕ ಹಾಗೂ ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಗೆ ಸಂಬಂಧಿಸಿದ ಗಣಿತ ಶಾರ್ಟ್‌ಕಟ್ ತಂತ್ರಗಳು ಮತ್ತು ಸಲಹೆಗಳ ಕುರಿತು ಕಾರ್ಯಾಗಾರ ಸೆ.21ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಶ್ರೀಮತಿ ಪ್ರಫುಲ್ಲ ಗಣೇಶ್ ಸಿಇಓ ಐ.ಅರ್. ಸಿ.ಎಂ.ಡಿ.ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸ್ಪರ್ಧಾತ್ಮಕ...
ದೇವಚಳ್ಳ ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ಸೆಪ್ಟೆಂಬರ್ 29 ರಂದು ಶುಕ್ರವಾರ ಪೂ.ಗಂಟೆ 11ಕ್ಕೆ ದೇವಚಳ್ಳ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನಡೆಸಿಕೊಡಲಿದ್ದಾರೆ ಎಂದು ದೇವಚಳ್ಳ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೂ ಸೆಪ್ಟೆಂಬರ್ 29 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕಂದ್ರಪ್ಪಾಡಿ, ತಳೂರು ಮತ್ತು...
ಬೆಳ್ಳಾರೆಯಿಂದ ಅರಂತೋಡು ಕಡೆಗೆ ತೆರಳುತ್ತಿದ್ದ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬೇಂಗಮಲೆಯಲ್ಲಿ ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ. ಅರಂತೋಡು ಮೂಲದ ಬಾಲಕೃಷ್ಣ ಮತ್ತು ಅವರ ಕುಟುಂಬ ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ಬಾಲಕೃಷ್ಣ ಅವರ ಕೈಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶಾಲಾ ಶಿಕ್ಷಣ ಇಲಾಖೆ ಸುಳ್ಯ ದ.ಕ.ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಆರಂತೋಡು ಶಾಲೆಯ ಮೈದಾನದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ಹರೀಶ್ ಉಳುವಾರು ವಹಿಸಿದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ...
ಅರಂತೋಡು ಗ್ರಾಮ ಪಂಚಾಯತ್ ಗೆ ಸ್ವಚ್ಛತೆಗೆ ಜಿಲ್ಲಾ ರಾಜ್ಯ ಪ್ರಶಸ್ತಿ ಲಭಿಸಿದೆ ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿದ್ಯಾ ರ್ಥಿ ಗಳಿಗೆ ಕರೆ ನೀಡಿದರು.ಇವತ್ತಿನ ದಿನಗಳಲ್ಲಿ ಮಕ್ಕಳು ಚಾಕಲೇಟ್ ತಿಂದು ಸಿಪ್ಪೆಯನ್ನು ಅಲ್ಲಿಯೇ ಬಿಸಾಡುವ ಬದಲು ಅದನ್ನು ಸುರಕ್ಷಿತ ಕಸದ ಡಬ್ಬಗಳಿಗೆ ಹಾಕಿ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬೇಕೆಂದು ಹೇಳಿದರು.ಅವರು ಆರಂತೋಡು ಪ್ರಾಥಮಿಕ ಶಾಲೆ...
Loading posts...
All posts loaded
No more posts