- Thursday
- November 21st, 2024
ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ಹಾಗೂ ತನಿಖೆಗೆ ಒತ್ತಾಯಿಸಿ ಆ.31 ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೋಡಿಮಾತನಾಡಿ ಕುಕ್ಕೆ ಸುಬ್ರಹ್ಮಣ್ಯ ನಾಗನ ಕ್ಷೇತ್ರದಲ್ಲಿ ನಾವೆಲ್ಲಾ ಇದ್ದು ಪ್ರಾರ್ಥನೆ ಮಾಡಿದ್ದೇವೆ. ಈ ಭಾರಿ ನ್ಯಾಯ ಸಿಗಲಿದೆ. ಆ ದಿನ ದೂರ ಇಲ್ಲ. ಎಂದರು. ಸೌಜನ್ಯಳಿಂದಾಗಿ ಲೋಕದಲ್ಲಿ ಧರ್ಮ ಸ್ಥಾಪನೆಯಾಗಬೇಕಾದ ಕಾಲ ಬಂದಿದೆ. ಸಮಾಜದಲ್ಲಿ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಆ.29 ರಂದು ಮರ್ದಾಳ ಬೆಥನಿ ಜೀವನ ಜ್ಯೋತಿ ಸ್ಪೆಷಲ್ ಸ್ಕೂಲ್ ನ ವಿಶೇಷ ಚೇತನ ಮಕ್ಕಳ ಶಾಲೆಯ ಅನ್ನದಾನಕ್ಕೆ ನಿಧಿ ಸಮರ್ಪಣೆ ಮಾಡಲಾಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಲ| ರಾಮಚಂದ್ರ ಪಳಂಗಾಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲ| ಪ್ರೋ ರಂಗಯ್ಯ ಶೆಟ್ಟಿಗಾರ್ ಪ್ರಾಸ್ತಾವಿಕ ಭಾಷಣ...
ಸುಳ್ಯ ಪೊಲೀಸರು ಮಾಧ್ಯಮಗಳ ಮೇಲೆ ದಾಖಲಿಸಿದ್ದ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದಾಗಿ ತಿಳಿದು ಬಂದಿದೆ. ಘಟನೆ ವಿವರ: ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನೋರ್ವ ಇದ್ದ ಎಂದು ಹಿಂದೂ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಸುಳ್ಯ ಠಾಣಾ ಪೊಲೀಸರು ಆರೋಪಿತ ಯುವಕರನ್ನು ವಶಕ್ಕೆ ಪಡೆದಿದ್ದರು. ವಿಷಯ ಸುದ್ದಿಯಾಗುತ್ತಲೇ ಅರುಣ್ ಕುಮಾರ್ ಪುತ್ತಿಲ...
ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಆಡಳಿತದೊಂದಿಗೆ ಬೆನಕಾ ಹೋಟೆಲ್ ಪುನರಾರಂಭಗೊಂಡಿದೆ. ಇಲ್ಲಿ ಮನೆ ಶೈಲಿ ಊಟ ಹಾಗೂ ಉಪಹಾರ ಲಭ್ಯವಿದ್ದು ಅಪ್ಪದಿಟ್ಟು, ನೀರುದೊಸೆ, ರೊಟ್ಟಿ, ಕಲ್ತಪ್ಪ, ಚಾ,ಕಾಪಿ, ಊಟ ದೊರೆಯುತ್ತದೆ. ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ ಇದೆ ಎಂದು ಮಾಲಕರಾದ ನಮಿತಾ ಪದ್ಮನಾಭ ಹರ್ಲಡ್ಕ ತಿಳಿಸಿದ್ದಾರೆ.
ಎಲ್ಲಿ ಅಗತ್ಯತೆ ಇದೆಯೋ ಅಲ್ಲಿ ನಾವಿರಬೇಕು. ಸೇವೆ ಮಾಡುವುದರಿಂದ ನಮಗೆ ತೃಪ್ತಿ ದೊರೆಯುತ್ತದೆ. ಮಂದಹಾಸ ನಗು ತರುವುದರೊಂದಿಗೆ ಬಡವರ ಸೇವೆ ಮಾಡುವುದೇ ಲಯನ್ಸ್ ಕ್ಲಬ್ ನ ಉದ್ದೇಶವಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಪ್ರೊ .ರಂಗಯ್ಯ ಶೆಟ್ಟಿಗಾರ್ ಹೇಳಿದರು. ಅವರು ಆ.30ರಂದು ಮರ್ದಾಳ ಬೆಥನಿ ವಿಶೇಷ ಮಕ್ಕಳ ಶಾಲೆಗೆ ಸುಬ್ರಹ್ಮಣ್ಯ...
ಸುಳ್ಯ ತಾಲೂಕು ಕಛೇರಿ ಮುಂಬಾಗದಲ್ಲಿ ಕಾರ್ಯಾಚರಿಸುತ್ತಿರುವ ಜೆರಾಕ್ಸ್ ಅಂಗಡಿಗೆ ಕಂಪ್ಯೂಟರ್ ಜ್ಞಾನವಿರುವ ನುರಿತ ಮಹಿಳ ಅಭ್ಯರ್ಥಿ ಬೇಕಾಗಿದ್ದು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಲು ಮಾಲಕರು ಕೋರಿದ್ದಾರೆ. 9945404383.
ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಸೆ. 01ರಂದು ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಜಯಕುಮಾರಿ ಬಿ ಡಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಆನಂದ ಬಾಣೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ವೀಣಾ ಎಂ ಟಿ, ಎಸ್ ಡಿ ಎಂ ಸಿ ಸದಸ್ಯರಾದ ಸುರೇಶ್...
ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಶಾಖಾಹಾರಿ ಎಂಬ ಚಿತ್ರ ಮೂಡಿಬರುತ್ತಿದ್ದು, ಇದಕ್ಕೆ ಸುಳ್ಯದ ಯುವ ಪ್ರತಿಭೆ ಮಯೂರ ಅಂಬೆಕಲ್ಲು ಸಂಗೀತ ನಿರ್ದೇಶನ ನೀಡಿದ್ದಾರೆ. ಶಾಖಾಹಾರಿ ಚಿತ್ರದ ಮೂಲಕ ಸುಳ್ಯದ ತೆರೆಮರೆಯ ಪ್ರತಿಭೆಯೊಂದು ಅನಾವರಗೊಂಡಿದೆ. ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಅಂಬೆಕಲ್ಲು ಮನೆತನದವರಾದ ಮಯೂರ್, ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಹಾಗೂ ಅಶ್ವಿನಿ ಶೈಲೇಶ್ ದಂಪತಿಗಳ ಪುತ್ರ....
ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 104ನೇ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ಸಂಘದ ಎಲ್ಲಾ ಸದಸ್ಯರಿಗೆ ತಲುಪಿಸುವ ಸಲುವಾಗಿ ಕ್ಯೂ.ಆರ್. ಕೋಡ್ ಮೂಲಕ ಆ.31ರಂದು ಸಂಘದ ಪ್ರಧಾನ ಕಛೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಮಹಾಸಭೆಯ ಕ್ಯೂ.ಆರ್. ಕೋಡ್ ಅನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು...
✍️ ಭಾಸ್ಕರ ಜೋಗಿಬೆಟ್ಟು ದೈವರಾಧನೆ ಎಂಬುವುದು ತುಳುನಾಡಿನ ಪೂಜ್ಯನೀಯ ಆರಾಧನ ಪದ್ಧತಿ. ಇಲ್ಲಿ ದೈವಗಳೆ ಪ್ರಮುಖ ಆರಾಧನಾ ಶಕ್ತಿಗಳು . ದೈವಗಳು ಸಾಮಾಜಿಕ ನ್ಯಾಯ ಕೊಡುವ ಮಾಯಾ ಶಕ್ತಿಗಳು. ದೈವರಾಧನೆಯಲ್ಲಿ ಹಿರಿಯರು ಮಾಡಿಕೊಂಡು ಬಂದ ಹಲವಾರು ಕಟ್ಟುಪಾಡುಗಳಿವೆ. ನಮ್ಮ ದೈವರಾಧನೆಯಲ್ಲಿ ಆಣೆ ಪ್ರಮಾಣಕ್ಕೆ ಭಾರಿ ಪ್ರಾಮುಖ್ಯತೆ ಇದೆ. ಆಣೆ ಮಾಡುವುದು ಮಕ್ಕಳಾಟಿಕೆಯಲ್ಲ…!! ಇದರ ಪ್ರಭಾವ ಅತ್ಯಂತ...
Loading posts...
All posts loaded
No more posts