Ad Widget

ಅರಂತೋಡು : ಪಂಚಾಯತ್ ಮುಂಭಾಗ ಚರಂಡಿಯ ಸ್ಲಾಬ್ ಕುಸಿತ – ಪಾದಚಾರಿಗಳಿಗೆ ಸಂಕಷ್ಟ

ಅರಂತೋಡು ಗ್ರಾಮ ಪಂಚಾಯತ್ ನಿಂದ ಕೂಗಳತೆ ದೂರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಪುಟ್ ಪಾತ್ ಮಲ್ಲಿಕಾ ಹೋಟೆಲ್‌ ಮುಂಬಾಗದಲ್ಲಿ ಕುಸಿತಗೊಂಡಿದ್ದು, ಇಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರಡಯಾಗುತ್ತಿದೆ. ಹಲವು ಸಮಯಗಳಿಂದ ಮುರಿದು ಬಿದ್ದಿರುವ ಸ್ಲಾಬ್ ಅನ್ನು ಇನ್ನಾದರೂ ಎಚ್ಚೆತ್ತು ಗ್ರಾಮ ಪಂಚಾಯತ್ ಮತ್ತು ಹೆದ್ದಾರಿ ಪ್ರಾಧಿಕಾರವು ಸರಿ ಪಡಿಸುವುದೇ ಎಂದು ಕಾದು ನೋಡಬೇಕಿದೆ.

ಸುಳ್ಯ ಪೋಲೀಸ್ ಠಾಣೆಯಲ್ಲಿ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶ ಚತುರ್ಥಿ ಸಮಿತಿಗಳ ಸಭೆ – ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ ಠಾಣಾಧಿಕಾರಿ

ಸುಳ್ಯದಲ್ಲಿ ಶನಿವಾರ ನಡೆಯಲಿರುವ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶ ಚತುರ್ಥಿ ಆಚರಣೆ ಹಿನ್ನಲೆಯಲ್ಲಿ ಸಮಿತಿಗಳ ಪ್ರಮುಖರ ಸಭೆಯನ್ನು ಸುಳ್ಯ ಆರಕ್ಷಕ ಠಾಣೆ ಸುಳ್ಯದಲ್ಲಿ ಜರುಗಿತು‌. ಸುಳ್ಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರಜೋಗಿ ,ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಈರಯ್ಯ ದಂತೂರು ನೇತೃತ್ವದಲ್ಲಿ ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಮತ್ತು...
Ad Widget

ಲೇಖನ : ಜೀವನದಲ್ಲಿ “ನಂಬಿಕೆ” ತುಂಬಾ ಅಮೂಲ್ಯವಾದದ್ದು…

ಜೀವನದಲ್ಲಿ ಕೆಲವೊಮ್ಮೆ ನಾವು ಎಲ್ಲರ ಮೇಲೆಯೂ ಕಣ್ಣುಮುಚ್ಚಿ ನಂಬಿಕೆ ಇಡುತ್ತಿರುತ್ತೇವೆ. ನಾವು ನಂಬಿಕೆ ಇಡುವ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಅರ್ಹರಾ…? ಅಂತ ನಾವು ಯೋಚಿಸುವುದೇ ಇಲ್ಲ. ಆದರೆ ಯಾವತ್ತಾದರೂ ಒಂದು ದಿನ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಮೋಸ ಮಾಡಿ ಹೊರಟುಹೋದರೆ ನಂಬಿ ಮೋಸ ಹೋದ ನಾವು ದುಃಖಿಸುತ್ತಾ ಕೂರಬೇಕಾಗುತ್ತದೆ. ಅದಕ್ಕಾಗಿಯೇ ಹಿರಿಯರು ಒಂದು...

ಕುಕ್ಕೆ ದೇವಳಕ್ಕೆ ಬೃಹತ್ ಗಾತ್ರದ ಫ್ಯಾನುಗಳ ಕೊಡುಗೆ

ಕುಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಜಯನಗರದ ಉದ್ಯಮಿ ವಿಕ್ರಮ ಏ.ವಿ.ಅವರು ಸೇವಾ ರೂಪದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಎಸಿಪಿ ಕಂಪನಿಯ ಎರಡು ಬೃಹದಾಕಾರದ ಸೀಲಿಂಗ್ ಫ್ಯಾನ್(HVLS) ಗಳನ್ನು ಕೊಡುಗೆಯಾಗಿ ಶ್ರೀ ದೇವಳಕ್ಕೆ ಗುರುವಾರ ನೀಡಿರುತ್ತಾರೆ. ಕ್ಷೇತ್ರ ಪುರೋಹಿತರಾದ ಮಧುಸೂಧನ ಕಲ್ಲೂರಾಯ ರವರು ಫ್ಯಾನುಗಳಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು .ಕೊಡುಗೆಯಾಗಿ ನೀಡಿದ ಎಸಿಪಿ ಕಂಪನಿಯ...

ಸುಬ್ರಹ್ಮಣ್ಯ : ಕ್ವಾಲಿಸ್ ಕಾರು ಬೆಂಕಿಗೆ ಆಹುತಿ

ಕುಕ್ಕೆ ಸುಬ್ರಮಣ್ಯದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲೆಯ ಸಮೀಪ ಕ್ವಾಲಿಸ್ ಕಾರು ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿಗೆ ಆಹುತಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಬೆಂಗಳೂರಿನಿಂದ ಸರ್ಪಸಂಸ್ಕಾರಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದಿದ್ದ ಕುಟುಂಬ ಒಂದು ಆದಿ ಸುಬ್ರಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆಯ ಮುಂಭಾಗ ಕಾರು ನಿಲ್ಲಿಸಿದ್ದರು. ಕಾರಿನಲ್ಲಿ ಆಚಾನಕ್ಕಾಗಿ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ಕಾರಿನ ಸಂಪೂರ್ಣ...

ಗುತ್ತಿಗಾರು : ಅಮರ ಸಂಜೀವಿನಿ ಒಕ್ಕೂಟದ ಸ್ತ್ರೀ ಶಕ್ತಿ ಮತ್ತು ಸಂಜೀವಿನಿ ಸಂಘದ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ

ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಅಮರ ಸಂಜೀವಿನಿ ಒಕ್ಕೂಟದ ವತಿಯಿಂದ ಶಂಖಪಾಲ ಸ್ತ್ರೀ ಶಕ್ತಿ, ಶಂಖಶ್ರೀ ಸ್ತ್ರೀ ಶಕ್ತಿ, ಶ್ರೀ ದುರ್ಗಾ ಸ್ತ್ರೀ ಶಕ್ತಿ, ಯಶಸ್ವಿ ಸಂಜೀವಿನಿ, ಬಾಂಧವ್ಯ ಸಂಜೀವಿನಿ, ಚಿಗುರು ಸಂಜೀವಿನಿ ಸಂಘದ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಮರ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ, ಎಲ್.ಸಿ.ಆರ್.ಪಿ ಗಳು, ಪಶುಸಖಿ, ಕೃಷಿ ಸಖಿ...

ಅಜ್ಜಾವರದಲ್ಲಿ ಚಿರತೆ ಸಾವು ಪ್ರಕರಣ, ಆರೋಪಿತರಿಗೆ ಷರತ್ತುಬದ್ಧ ಜಾಮೀನು ಮಂಜೂರು.

ಅಜ್ಜಾವರ ಗ್ರಾಮದ ಪಡ್ಡಂಬೈಲಿನಲ್ಲಿ ಚಿರತೆ ಸಾವು ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿತರಿಗೆ ಮಂಗಳೂರಿನ 6 ನೇ ಹೆಚ್ಚುವರಿ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ದೊರಕಿದೆ. ಪಡ್ಡಂಬೈಲಿನಲ್ಲಿ ಆ.29 ರಂದು‌ ಉರುಳಿಗೆ ಚಿರತೆಯೊಂದು ಬಿದ್ದು ಮೃತಪಟ್ಟಿತ್ತು. ಉರುಳಿಟ್ಟು ಚಿರತೆ ಸಾವಿಗೆ ಕಾರಣರಾದರೆಂಬ ಆರೋಪದಲ್ಲಿ ಸ್ಥಳ ಮಾಲಿಕರಾದ ಜಯರಾಮ ಪಡ್ಡಂಬೈಲು ಹಾಗೂ ಪೃಥ್ವಿ ಪಡ್ಡಂಬೈಲು ಎಂಬುವವರ ವಿರುದ್ದ ಅರಣ್ಯಾಧಿಕಾರಿಗಳು...

ಸೆ‌.15 ರಂದು ಸುಬ್ರಹ್ಮಣ್ಯದ ಕೆ‌.ಎಸ್ .ಎಸ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬ್ಲಡ್ ಬ್ಯಾಂಕ್ ಮಂಗಳೂರು ಬೃಹತ್ ರಕ್ತದಾನ ಶಿಭಿರ ಸೆ‌.15 ರಂದು ಕೆ‌.ಎಸ್ .ಎಸ್ ಕಾಲೇಜಿನಲ್ಲಿ ನಡೆಯಲಿದೆ. ಸಮಾರಂಭವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ...

ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಆಪ್ತ ಸಹಾಯಕರಾಗಿ ಅವಿನಾಶ್ ಬಿ.ಆರ್. ನೇಮಕ.

ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಇವರ ಆಪ್ತ ಸಹಾಯಕರಾಗಿ ಅವಿನಾಶ್ ಬಿ.ಆರ್. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಒಳಮೊಗ್ರ ಗ್ರಾಮ ಪಂಚಾಯತ್, ಪುತ್ತೂರು ತಾಲ್ಲೂಕು, ಇವರನ್ನು ಮಾನ್ಯ ಶಾಸಕರ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿ ಸಂದೀಪ್ ವಿ. ಬೆಟ್‌ಸೂರ್ ಅಧೀನ ಕಾರ್ಯದರ್ಶಿ ಕರ್ನಾಟಕ ವಿಧಾನಸಭೆ ಸಚಿವಾಲಯ ಇವರು ಆದೇಶದಲ್ಲಿ ತಿಳಿಸಿದ್ದಾರೆ.

ನ.17-18 ರಂದು ಸುಳ್ಯದಲ್ಲಿ ಪ್ರೋ ಮಾದರಿಯ ರಾಷ್ಟ್ರೀಯ ಮಟ್ಟದ 8 ತಂಡಗಳ ಮ್ಯಾಟ್ ಕಬಡ್ಡಿ ಪಂದ್ಯಾಟ- ಪೋಸ್ಟರ್ ಬಿಡುಗಡೆ.

ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ನ.17 ಮತ್ತು 18ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿರುವ ಪ್ರಭು ಮೈದಾನದಲ್ಲಿ ನಡೆಯಲಿದೆ. ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ೧೦ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ ಪೋಸ್ಟರ್...
Loading posts...

All posts loaded

No more posts

error: Content is protected !!