Ad Widget

ಅ.03: ಸುಳ್ಯದಲ್ಲಿ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಜಿಲ್ಲಾ ಮಟ್ಟದ ಸಮಾವೇಶ – ಡಾ. ಡಿ. ವೀರೇಂದ್ರ ಹೆಗ್ಗಡೆ ಭಾಗಿ

. . . . . . .

ಅಕ್ಟೋಬರ್ ೦3 ರಂದು ನಡೆಯಲಿರುವ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥ ಮತ್ತು ಜಿಲ್ಲಾ ಮಟ್ಟದ ಸಮಾವೇಶ ಸುಳ್ಯದ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಮುದಾಯ ಭವನದಲ್ಲಿ ಜರುಗಲಿದೆ ಎಂದು ಜಿಲ್ಲಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ತಿಳಿಸಿದರು.

ಸೆ 30 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಕ್ಟೋಬರ್ 2  ಮಹಾತ್ಮ ಗಾಂಧೀಜಿಯವರ ಜನ್ಮದಿನ, ಪೂಜ್ಯ ಬಾಪೂಜಿಯವರು ದುಶ್ಚಟ ಮುಕ್ತ ಸಮಾಜದ ಕನಸು ಕಂಡವರು, ಅವರ ಕನಸಿನ ಭಾರತದಲ್ಲಿ ಮದ್ಯ ಮತ್ತು ಮಾದಕ ದ್ರವ್ಯಗಳ ಶಾಪ ತಟ್ಟದಿರಲಿ’ ಎಂದು ಪ್ರಾರ್ಥಿಸಿದವರು. ಅವರ 18 ರಚನಾತ್ಮಕ ಕಾರ್ಯಕ್ರಮದಲ್ಲಿ 3ನೇಯ ಕಾರ್ಯಕ್ರಮವೇ ಪಾನ ನಿಷೇಧ ಬೆಂಕಿ ದೇಹವನ್ನು ಸುಟ್ಟರೆ, ಮದ್ಯಪಾನ ದೇಹ ಮತ್ತು ಆತ್ಮ ಎರಡನ್ನೂ ಸುಡುತ್ತದೆ ಎಂದರು. ಮದ್ಯಮುಕ್ತ ಕುಟುಂಬ ಆನಂದ ಸಾಗರ, ಪ್ರತಿಯೊಬ್ಬರು ದುಶ್ಚಟಕ್ಕೆ ಬಲಿಬೀಳದೆ ಸಮೃದ್ಧ ಭಾರತವನ್ನು ಕಟ್ಟಬೇಕೆಂದರು. ಗಾಂಧೀಜಿಯವರ ಈ ಕಲ್ಪನೆಗೆ ಪೂರಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮ ಸ್ವರಾಜ್ಯದ ಕನಸಿನೊಂದಿಗೆ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ಯೋಜನೆಗೆ ಹಾಗೂ ಸಮೃದ್ಧ ಕುಟುಂಬಗಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವವರು ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಜನಜಾಗೃತಿ ವೇದಿಕೆಯ ಮೂಲಕ 1723 ಮದ್ಯವರ್ಜನ ಶಿಬಿರಗಳ ಮೂಲಕ 150 ಲಕ್ಷ ವ್ಯಸನಿಗಳ ಮನಪರಿವರ್ತನೆ ಮಾಡಲಾಗಿದೆ ಎಂದರು.
ಕಳೆದ 10 ದಶಕಗಳಿಂದ 15,448 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ 13 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತಾದ ಮಾಹಿತಿ, ಜಾಗೃತಿ ಮತ್ತು ಬೋಧನೆಯನ್ನು ನೀಡಲಾಗಿದೆ. 1156 ಮಂದಿ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತುಗೊಳಿಸಿ ರಾಜ್ಯವ್ಯಾಪಿ ಕಾರ್ಯಕ್ರಮ ನಡೆಸಲು ತರಬೇತಿ ನೀಡಲಾಗಿದೆ.

ರಾಜ್ಯಾದ್ಯಂತ 108 ಕಾರ್ಯಕ್ರಮಗಳ ಆಯೋಜನೆ: ಜನಜಾಗೃತಿ ವೇದಿಕೆಯ ಮೂಲಕ ರಾಜ್ಯದಲ್ಲೆಡೆ 3 ಜಿಲ್ಲಾ ವೇದಿಕೆಗಳನ್ನು ರಚಿಸಲಾಗಿದ್ದು, ಈ ಮೂಲಕ ಗಾಂಧೀಜಿಯವರ ಜನ್ಮ ದಿನಾಚರಣೆಯಂದು ವಿಶೇಷವಾಗಿ ಗಾಂಧಿಸ್ಮೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧಿ ವಿಚಾರ ಧಾರೆಗಳನ್ನು ತಿಳಿಯಪಡಿಸುತ್ತಾ ಕಾರ್ಯಾಗಾರ, ಜನಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮ, ಪಾನಮುಕ್ತರ ಸಮಾವೇಶ, ಮಹಿಳಾ ಸಮಾವೇಶಗಳನ್ನು ಹಮ್ಮಿಕೊಂಡು ವ್ಯಾಪಕ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯವನ್ನು ರೂಪಿಸಲಾಗಿದೆ. ರಾಜ್ಯಾದ್ಯಂತ ತಾಲೂಕು ಮತ್ತು ಜಿಲ್ಲಾಮಟ್ಟದ 108 ಕಾರ್ಯಕ್ರಮಗಳನ್ನು ಇಂದಿನಿಂದ ಆಕ್ಟೋಬರ್ 15ರೊಳಗೆ ನಡೆಸಲಾಗುವುದು.
ಸಪ್ತಾಹದ ಮೂಲಕ ವಾರಾದ್ಯಂತ ಜಾಗೃತಿ : ಈ ಬಾರಿ ಅಕ್ಟೋಬರ್ 2ರ ಕಾರ್ಯಕ್ರಮವನ್ನು ಅಕ್ಟೋಬರ್ 2ರಿಂದ 15ರವರೆಗೆ ಆಯೋಜಿಸಲಾಗುವುದು. ಈ ಮೂಲಕ ಸುಮಾರು ಲಕ್ಷಕ್ಕೂ ಮಿಕ್ಕಿದ ಜನರಿಗೆ ವ್ಯಸನಮುಕ್ತ ಸಮಾಜ ನಿರ್ಮಾಣದ ಜಾಗೃತಿ ಮೂಡಿಸಲಾಗುವುದು.

ವಿಶೇಷ ಕಾರ್ಯಕ್ರಮಗಳು: ಸಾಧಕ ವ್ಯಸನಮುಕ್ತರನ್ನು ಗುರುತಿಸಿ ‘ಜಾಗೃತಿ’ ಅಣ್ಣ’ ಮತ್ತು ‘ಜಾಗೃತಿ ಮಿತ’ ಮಧ್ಯಪಾನ ಮಾಡುವುದನ್ನು ಬಿಟ್ಟು ಇತರರನ್ನು ಮದ್ಯಪಾನ ದಿಂದ ಬಿಡಿಸಿದವರಿಗೆ ಪ್ರಶಸ್ತಿ ಪ್ರದಾನ ಸುಮಾರು ೨೫ ಕ್ಕು ಹೆಚ್ಚು ಮಂದಿಗಳಿಗೆ ನೀಡಲಾಗುವುದು ಎಂದು ಹೇಳಿದರು ಅಲ್ಲದೇ ತುರ್ತು ಸಂದರ್ಭದಲ್ಲಿ ಶ್ರಮಿಸುವ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಅವತ್ ಕಾಲದ ಆಪತ್ ಬಾಂಧವರಿಗೆ ಅಮೋಘ ಸಾಧನೆ ಮಾಡಿದ “ಶೌರ್ಯ ಶ್ರೇಷ್ಠ ಸಾಧಕರನ್ನಾಗಿ ಗುರುತಿಸುವಿಕೆ, ಜ್ಞಾನವಿಕಾಸ ಕೇಂದ್ರದ ಸಾಂಸ್ಕೃತಿಕ ಕಾರ್ಯಕ್ರಮ, ಗಂಧಿಕೃತಿ, ಬೃಹತ್‌ ಜನಜಾಗೃತಿ ಜಾಥಾ ಮತ್ತು ಸಮಾವೇಶ, ಮದ್ಯಮುಕ್ತ ರಾಜ್ಯಕ್ಕಾಗಿ ಹಕ್ಕೊತ್ತಾಯ ಮಂಡನೆ, ಮುಂತಾದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಸುಳ್ಯ ಕಾರ್ಯಕ್ರಮದಲ್ಲಿ ಡಾ| ಹೆಗ್ಗಡೆಯವರು: ಈ ಬಾರಿ ವಿಶೇಷವಾಗಿ ಸುಳ್ಯ ತಾಲೂಕಿನ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 02: ಗಾಂಧಿ ಜಯಂತಿಯ ಪ್ರಯುಕ್ತ ಗಾಂಧಿಸ್ಕೃತಿ, ಬೃಹತ್‌ ಜನಜಾಗೃತಿ ಜಾಥಾ ಮತ್ತು ಸಮಾವೇಶ ಸಮಾರಂಭವನ್ನು ಆಕ್ಟೋಬರ್ 3ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕು.ಭಾಗೀರಥಿ ಮುರುಳ್ಯ, ಶಾಸಕರು, ವಿಧಾನಸಭಾ ಕ್ಷೇತ್ರ ಸುಳ್ಯರವರು ನೆರವೇರಿಸಲಿರುವರು.
ಕಾರ್ಯಕ್ರಮದಲ್ಲಿ ‘ನವಜೀವನ ಸಾಧಕ’ ಪ್ರಶಸ್ತಿಯನ್ನು ಶ್ರೀ ರಾಜಣ್ಣ ಮೂ, ಕೊರವಿ, ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ಜನಜಾಗೃತಿವೇದಿಕೆರವರು ವಿತರಿಸಲಿದ್ದಾರೆ. ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಮಹಾಲಕ್ಷ್ಮಿ, ಕ್ಷೇತ್ರ ಶ್ರೀ ಧಾಮ ಮಾಣಿಲ ಆಶೀರ್ವಚನ ಮಾಡಲಿರುವವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್ ಹೆಚ್ ಮಂಜುನಾಥ್‌ ರವರು ಆಶಯ ಭಾಷಣ ಮಾಡಲಿರುವರು. ರೆ.ಫಾ. ವಿಕ್ಟರ್ ಡಿಸೋಜ, ಧರ್ಮ ಗುರುಗಳು, ಸೈಂಟ್ ಬ್ರಿಜಿಡ್ ಚರ್ಚ್‌ಸುಳ್ಯ ಶುಭಸಂದೇಶ ನೀಡಲಿರುವವರು, ಶ್ರೀ ಶಂಕರಪ್ಪ, ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ಬೆಂಗಳೂರು ಡಾ. ಕೆ.ವಿ ರೇಣುಕಾ ಪ್ರಸಾದ್ ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ, ಬೆಂಗಳೂರು, ಪ್ರೊಫೆಸರ್ ಯೂಸುಫ್, ವೈಚಾರ್ ನಿವೃತ ಪ್ರಾಂಶುಪಾಲರು, ನೆಹರು ಆರ್ಟ್ಸ್ ಸೈನ್ಸ್, ಕಾಮರ್ಸ್, ಕಾಲೇಜು, ಹುಬ್ಬಳ್ಳಿ, ಆ‌ ಬಿ ಹೆಬ್ಬಳ್ಳಿ, ಉದ್ಯಮಿಗಳು, ಮುಂಬೈ, ಶ್ರೀ ಎಂ.ಹೆಚ್ ಸುಧಾಕರ, ಮುಖ್ಯಾಧಿಕಾರಿ, ನಗರ ಪಂಚಾಯತ್ ಸುಳ್ಯ ದ.ಕ. ಉಪಸ್ಥಿತರಿರುವರು.

ಗೌರವ ಉಪಸ್ಥಿತರಾಗಿ ಎನ್ ಎ ರಾಮಚಂದ್ರ, ನಿಕಟಪೂರ್ವ ಅಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆ, ಲೋಕನಾಥ ಅಮೆಚೂರು, ಅಧ್ಯಕ್ಷರು ಜನಜಾಗೃತಿ ವೇದಿಕೆ ಸುಳ್ಯ, ದುರ್ಗೆ ಗೌಡ, ಕರಾವಳಿ ಪ್ರಾದೇಶಿಕ ನಿರ್ದೇಶಕರು ಉಡುಪಿ,  ವಿವೇಕ್ ವಿ., ಪ್ಯಾಸ್, ಪ್ರಾದೇಶಿಕ ನಿರ್ದೇಶಕರು, ಅಕಜ ವೇದಿಕೆ ಬೆಳ್ತಂಗಡಿ,  ಸುರೇಶ್‌ ಕಣೆಮರಡ್ಕ, ಕೇಂದ್ರ ಒಕ್ಕೂಟ ಅಧ್ಯಕ್ಷರು, ಸುಳ್ಯ ಉಪಸ್ಥಿತರಿರುವರುವರು ಎಂದು ತಿಳಿಸಿದರು. ಅಹಾರ ಸಮಿತಿಯ ಅಧ್ಯಕ್ಷರಾಗಿ ರಾಧಾಕೃಷ್ಣ ರೈ ಬೂಡು ಹಾಗೂ ಮೆರವಣಿಗೆ ಯ ಜವಾಬ್ದಾರಿಯನ್ನು ಸುರೇಶ್ ಕಣೆಮರಡ್ಕರಿಗೆ ವಹಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಜಿಲ್ಲಾಧ್ಯಕ್ಷರಾದ ಎನ್ ಎ ರಾಮಚಂದ್ರ , ಪ್ರವೀಣ್ ಕುಮಾರ್ , ಲೋಕನಾಥ್ ಅಮೆಚೂರ್ , ಸುರೇಶ್ ಕಣೆಮರಡ್ಕ , ಪದ್ಮನಾಭ ಶೆಟ್ಟಿ , ನಾಗೇಶ್ ಪೈ,  ರಾಧಾಕೃಪ್ಣ ರೈ , ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!