ಅಕ್ಟೊಬರ್ 2 ರಂದು ಸುಳ್ಯ ನಗರ ಪಂಚಾಯತ್ ವತಿಯಿಂದ ನಡೆಯುವ ಗಾಂಧೀಜಯಂತಿ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅಥಿತಿಗಳ ಪಟ್ಟಿಯಲ್ಲಿ ಒಬ್ಬ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿನಯಕುಮಾರ ಕಂದಡ್ಕರ ಹೆಸರನ್ನು ಪಂಚಾಯತ್ ಅಧಿಕಾರಿಗಳು ಹಾಗು ಆಡಳಿತಾಧಿಕಾರಿಗಳು ಅಚ್ಚು ಹಾಕಿಸಿದ್ದಾರೆ ,ಇದನ್ನು ಪ್ರಶ್ನಿಸಿದಾಗ ನಮ್ಮ ಮುಖ್ಯಧಿಕಾರಿ ಹೇಳುತ್ತಾರೆ ಅವರನ್ನು ನಿಕಟಪೂರ್ವ ಅಧ್ಯಕ್ಷರ ನೆಲೆಯಲ್ಲಿ ಅಥಿತಿ ಮಾಡಿದ್ದೇವೆ ಎಂದು, ಇಂತಹ ಕ್ರಮ ಯಾವ ಸರಕಾರಿ ಸಂಸ್ಥೆಯಲ್ಲಿ ಇದೆ? ಇದು ಸರಕಾರಿ ಸಂಸ್ಥೆಯಾದ ಕಾರಣ ಯಾವುದೆ ಕಾರ್ಯಕ್ರಮ ಮಾಡುದಿದ್ದರೂ ಪ್ರೋಟೋಕಾಲ್ ಅನ್ನೋದಿದೆ .ಈ ಪ್ರೋಟೋಕಾಲ್ನಲ್ಲಿ ಈ ರೀತಿಯ ಅವಕಾಶ ಇದೆಯಾ? ಇದಕ್ಕೆ ಸಂಬಂದಿಸಿದ ಅಧಿಕಾರಿಗಳಿಂದ ಸ್ಪಷ್ಟಿಕರಣ ಬಯಸುತ್ತೇನೆ ,ಇಲ್ಲಿ ಮಾಜಿ ಅಧ್ಯಕ್ಷರನ್ನು ಒಂದು ಮುಲಾಜಿಯಿಂದ ಹಾಕಿದ್ದೇವೆ ಎಂದಾದರೆ ಅಡ್ಡಿಯಿಲ್ಲ ,ಅಂದ್ರೆ ಹಾಗೆ ನಿಕಟ ಪೂರ್ವ ಅಧ್ಯಕ್ಶರು ಅಂತ ಹಾಕೋದಕ್ಕೆ ಅಸ್ಪದ ಇದೆಯಾ ? ಮಾಜಿ ಅಧ್ಯಕ್ಷ ಅಂತಾದರೆ ಇನ್ನೂ ಕೆಲವರು ಇದ್ದಾರೆ .ಇಲ್ಲ ಮಾಜಿ ಹಾಗು ಹಾಲಿ ಸದಸ್ಯರು ಅಂದರೆ ಅವಕಾಶ ನಂಗೂ ಇದೆ .ಹೀಗಿರುವಾಗ ಈ ರೀತಿಯ ರಾಜಕಿಯ ಮಾಡೊದು ಯಾರು ? ಇದನ್ನ ನಾವು ಪ್ರತಿಭಟಿಸಬೇಕಾಗಿದೆ ,ಕಾದು ನೊಡಿ ! ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ ವೆಂಕಪ್ಪ ಗೌಡ ಆರೋಪಿಸಿದ್ದಾರೆ.
- Friday
- November 1st, 2024