ಕುಕ್ಕೆ ಸುಬ್ರಹ್ಮಣ್ಯ ದಿಂದ ಕುಮಾರ ಪರ್ವತಕ್ಕೆ ಪ್ರತಿ ವರ್ಷ ಚಾರಣಿಗರ ಸಂಖ್ಯೆ ಜಾಸ್ತಿಯಾಗುತ್ತದೆ ಇರುತ್ತದೆ. ಈ ವರ್ಷ ಮೇ ತಿಂಗಳಿನಿಂದ ಅರಣ್ಯ ಇಲಾಖೆಯವರು ಚಾರಣಕ್ಕೆ ಪ್ರವಾಸಿಗರಿಗೆ /ಚಾರಣಿಗರಿಗೆ ನಿರ್ಬಂಧ ಗೋಳಿಸಿದ್ದರು. ಇದೀಗ ನಿರ್ಬಂಧ ಮುಕ್ತಗೊಳಿಸಿ ಚಾರಣಿಗರಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡಿರುತ್ತಾರೆ. ಸೆ.29 ರಂದೇ ಬೃಹತ್ ಸಂಖ್ಯೆಯಲ್ಲಿ ಸುಮಾರು 750ಕ್ಕೂ ಅಧಿಕ ಚಾರಣಿಗರು ಜಮಾಯಿಸಿದ್ದರು. ವಿವಿಧ ಊರುಗಳಿಂದ ಅದರಲ್ಲೂ ಹೆಚ್ಚಾಗಿ ಬೆಂಗಳೂರಿನಿಂದ ಬಂದವರ ಸಂಖ್ಯೆಯೇ ಜಾಸ್ತಿ ಇತ್ತು. ಚಾರಣಿಗರು ತಮಗೆ ಬೇಕಾದ ಟೆಂಟ್ ,ಆಹಾರ ಪದಾರ್ಥಗಳು, ನೀರಿನ ಪಟ್ಟಣಗಳನ್ನ ತಮ್ಮ ಜೊತೆಯಲ್ಲಿ ಒಯ್ಯುತ್ತಿರುವುದು ಕಂಡುಬಂತು. ಚಾರಣ ಸಂದರ್ಭದಲ್ಲಿ ಸ್ವಚ್ಛತೆಯನ್ನ ಕಾಪಾಡಲು ಅರಣ್ಯ ಇಲಾಖೆಯವರು ಕಟ್ಟುನಿಟ್ಟಿನ ಕ್ರಮವಹಿಸುತ್ತಿದ್ದಾರೆ, ಅಲ್ಲಲ್ಲಿ ಸೂಚನಾ ಫಲಕಗಳನ್ನು ಕೂಡ ಹಾಕಿದ್ದಾರೆ. ಮಳೆ ಆರಂಭವಾಗಿರುವುದು ಚಾರಣಿಗರಿಗೆ ಬೇಸರ ಮೂಡಿಸಿದೆ.
- Thursday
- November 21st, 2024