
ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಅ.1ರಂದು ಸುಳ್ಯದಲ್ಲಿ ಗಾಣಿಗ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಕೇರ್ಪಳ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಜರುಗಲಿರುವ ಗಾಣಿಗ ಸಮ್ಮಿಲನ 2023 ಕಾರ್ಯಕ್ರಮದ ಭಾಗಿಯಾಗಲು ಗಾಣಿಗ ಮಠಾಧಿಶರಾದ ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ಗಳು ಸುಳ್ಯಕ್ಕೆ ಆಗಮಿಸಿದ್ದಾರೆ. ಸ್ವಾಮಿಜಿಯವರನ್ನು ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಆಶೀರ್ವಾದ ಪಡೆದರು.
