Ad Widget

ಮರ್ದಾಳ : ಆನೆ ದಾಳಿಯಿಂದ ವ್ಯಕ್ತಿಗೆ ಗಾಯ – ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಭರವಸೆ

ಕಡಬದ ಮರ್ದಾಳ ಸಮೀಪ ಕಾಡಾನೆ ತುಳಿತಕ್ಕೊಳಗಾದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು. ಆನೆ ತುಳಿತಕ್ಕೊಳಗಾದ ನೇಲ್ಯಡ್ಕ ನಿವಾಸಿ ಚೋಮ ರವರ ಮನೆಗೆ ಸುಳ್ಯ ಶಾಸಕಿರವರು ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿದರು. ಸರ್ಕಾರದಿಂದ ಸಿಗುವ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು. ಚಿಕಿತ್ಸೆ ವೆಚ್ಚವನ್ನು ಇಲಾಖೆಯಿಂದಲೇ ಬರಿಸುವಂತೆ ಹಾಗೂ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅರಣ್ಯದಂಚಿನ ರಸ್ತೆ ಬದಿಗೆ ಸೋಲಾರ್ ದೀಪ, ರಸ್ತೆ ಬದಿ ಇರುವ ಪೊದೆಗಳನ್ನು ತೆರವುಗೊಳಿಸಬೇಕು ಎಂದು ಈ ವೇಳೆ ನಿವಾಸಿಗಳು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿ ವಿಮಲ್ ಬಾಬು ಆರ್, ಉಪ ವಲಯ ಅರಣ್ಯಧಿಕಾರಿ ಯೋಗೀಶ್ ಜಿ ಸಿ, ಗಸ್ತು ಅರಣ್ಯ ಪಾಲಕರು ಪ್ರಕಾಶ್, ಐತ್ತೂರು ಗ್ರಾಮ ಪಂ ಅಧ್ಯಕ್ಷರಾದ ವತ್ಸಲಾ ಜೆ, ಸದಸ್ಯರಾದ ಉಷಾ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಮನೋಹರ್ ರೈ, ನಾರಾಯಣ ಶೆಟ್ಟಿ ಅತ್ಯಡ್ಕ, ಹರೀಶ್ ಬಂಟ್ರ, ಗಂಗಾಧರ ರೈ, ತಮ್ಮಯ್ಯ ಗೌಡ, ಭಾಗೀರಥಿ, ಕೆ ಟಿ ಪಿಲಿಪ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading