ಸುಳ್ಯದ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಪರವಾನಿಗೆ ಪಡೆದು ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ಸಮಾಜ ಭಾಂಧವರು ಮತ್ತು ಸಮಿತಿ ಆಳವಡಿಸಿದ್ದ ಬ್ಯಾನರ್ ಗಳನ್ನು ತೆರವು ಗೊಳಿಸಿದ ವಿಚಾರವಾಗಿ ಪೋಲಿಸ್ ಠಾಣೆ ಮತ್ತು ನಗರ ಪಂಚಾಯತ್ ಗೆ ದೂರು ನೀಡಿದ ಘಟನೆ ವರದಿಯಾಗಿದೆ.
ಸುಳ್ಯದ ಮುಖ್ಯ ರಸ್ತೆಯ ಬಳಿಯ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಪಕ್ಕದಲ್ಲಿ ಅಳವಡಿಸಿರುವ ಗಾಣಿಗ ಸಮ್ಮಿಲನದ ಸ್ವಾಮಿಜಿ ಮತ್ತು ಅಥಿತಿ ಗಣ್ಯರ ಬ್ಯಾನರ್ ಗಳನ್ನು ರಾತ್ರೋ ರಾತ್ರಿ ತೆರವು ಮಾಡಿದ ಸುಳ್ಯದ ಬ್ಯಾನರ್ ಮುದ್ರಣ ಸಂಸ್ಥೆಯೊಂದು ತಾವು ತಯಾರಿಸಿದ ಬ್ಯಾನರ್ ಅಳವಡಿಸಿದ ಘಟನೆ ನಡೆದಿತ್ತು. ಅ.1ರಂದು ನಡೆಯಬೇಕಾಗಿದ್ದ ಗಾಣಿಗ ಸಮ್ಮಿಲನ ಕಾರ್ಯಕ್ರಮಕ್ಜೆ ಪರವಾನಿಗೆ ಪಡೆದು ಅಳವಡಿಸಿದ್ದರೂ ಬ್ಯಾನರನ್ನು ಬಿಚ್ಚಿ ನೆಲದಲ್ಲಿ ಇರಿಸಿದ್ದರು. ಇದನ್ನು ಗಮನಿಸಿದ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ, ಗೋಪಾಲಕೃಷ್ಣ ಮೊರಂಗಲ್ಲು, ಮಾಹಾಲಿಂಗನ್ ಭಾಜರತೊಟ್ಟಿ, ಪ್ರವೀಣ್ ಜಯನಗರ , ವಿಜಯ ಮತ್ತಡ್ಕ , ಕೇಶವ ಮೊರಂಗಲ್ಲು, ಶಿವಪ್ರಸಾದ್ ಪೇರಾಲು ಸೇರಿದಂತೆ ಪದಾಧಿಕಾರಿಗಳು ಸೆ-28ರ ಸಂಜೆ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯು ನಗರ ಪಂಚಾಯತ್ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಶಾಂತಿಯುತವಾಗಿ ಬಗೆಹರಿಸಲು ಮನವಿ ಮಾಡಿದ ಹಿನ್ನಲೆಯಲ್ಲಿ ಅ-3ರಂದು ನಡೆಯಲಿರುವ ಕಾರ್ಯಕ್ರಮದ ಬ್ಯಾನರನ್ನು ಇನ್ನೊಂದು ಕಡೆಯಲ್ಲಿ ಅಳವಡಿಸಿದ್ದಾರೆ.
ಗಾಣಿಗ ಸಮಾಜದವರು ಅನುಮತಿ ಪಡೆದೇ ಬ್ಯಾನರ್ ಅಳವಡಿಸಿದ್ದಾರೆ. ಮತ್ತು ಅದನ್ನು ನಾವು ಗಮನಿಸಿದ್ದೇವೆ. ಆದರೇ ರೀತಿಯಲ್ಲಿ ಕೇಳದೆ ತೆರವುಗೊಳಿಸುವುದು ಸರಿಯಲ್ಲ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ ಎಚ್ ಸುಧಾಕರ್ ತಿಳಿಸಿದ್ದಾರೆ.
ಕೆಎಸ್ ಆರ್ ಟಿಸಿ ಬಳಿಯಲ್ಲಿ ಅಳವಡಿಸಿದ ಬ್ಯಾನರ್ ವಿಚಾರ ನಮಗೆ ತಿಳಿದಿಲ್ಲ. ನಾವು ಹಾಗೆ ಒಂದು ಕಾರ್ಯಕ್ರಮದ ಬ್ಯಾನರ್ ತೆರವುಗೊಳಿಸಿ ಇನ್ನೊಬ್ಬರ ಮನಸ್ಸಿಗೆ ನೋವು ನೀಡಿ ಇನ್ನೊಂದು ಬ್ಯಾನರ್ ಅಳವಡಿಕೆ ಮಾಡುವುದಿಲ್ಲಾ ಮತ್ತು ಮಾಡಿಲ್ಲ ಎಂದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮ್ಯಾನೇಜರ್ ಆತೀಶ್ ತಿಳಿಸಿದ್ದಾರೆ .
ಸುಳ್ಯದಲ್ಲಿ ಬ್ಯಾನರ್ ಅಳವಡಿಸಲು ಮೂರು ಜನರಿಗೆ ಮಾತ್ರ ಅವಕಾಶ ಇದೆ ಅಲ್ಲದೇ ಅಲ್ಲಿ ಅಷ್ಟು ದೊಡ್ಡ ಬ್ಯಾನರ್ ಅಳವಡಿಕೆ ಮಾಡಬಾರದು. ನಾವು ಕೂಡ ಪರವಾನಿಗೆ ಪಡೆದು ಅಳವಡಿಸಿದ್ದೇವೆ ಬ್ಯಾನರ್ ಅಳವಡಿಕೆ ಸಂಸ್ಥೆಯವರು ಅಮರ ಸುದ್ದಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ರಾಜಕೀಯ ನಾಯಕರಾದ ಜಯಪ್ರಕಾಶ್ ರೈಯವರ ಹೆಸರಿನಲ್ಲಿದ್ದು ಈ ವಿಚಾರ ತಿಳಿಯುತ್ತಿದ್ದಂತೆ ಅವರು ಮುದ್ರಣ ಸಂಸ್ಥೆಯವರಿಗೆ ಕರೆಮಾಡಿ ಈ ಕೂಡಲೇ ತೆರವು ಮಾಡಬೇಕು ನನ್ನ ಬ್ಯಾನರ್ ಹಾಗೆ ಅಳವಡಿಸಲು ಯಾರು ಹೇಳಿದ್ದು ಅವರ ಬ್ಯಾನರ್ ಅಲ್ಲೆ ಅಳವಡಿಕೆ ಆಗಬೇಕು. ನಾನೂ ಶುಭಕೋರುವ ಬ್ಯಾನರ್ ಇನ್ನೊಂದೆಡೆ ಹಾಕಿ ಎಂದು ಹೇಳಿದ ಮೇರೆಗೆ ತೆರವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಪೋಲಿಸ್ ಠಾಣೆಗೆ ಮೆಟ್ಟಿಲೇರಿದ್ದ ಪ್ರಕರಣ ಇದೀಗ ಶಾಂತಿಯುತವಾಗಿ ಇತ್ಯರ್ಥವಾಗಿದೆ.