ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 52ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19ರಿಂದ ಸೆ.23ವರೆಗೆ ಕುಕ್ಕೆಸುಬ್ರಹ್ಮಣ್ಯದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಅದ್ದೂರಿ ಶೋಭಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಿತು. 108 ತೆಂಗಿನಕಾಯಿ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಾಂಸ್ಕೃತಿಕ ಮನೋರಂಜನೆ,ಕುಣಿತ ಭಜನೆ, ಚೆಂಡೆವಾದನ, ಡಿಜೆ ಅಬ್ಬರ ಜತೆಗೆ ಸ್ತಬ್ಧಚಿತ್ರ ಸ್ಪರ್ಧೆ ಗಣೇಶೋತ್ಸವದ ಮೆರುಗನ್ನು ಹೆಚ್ಚಿಸಿತು. ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ, ಭಜನೆ, ಭಕ್ತಿಗಾನ, ನೃತ್ಯ ಸಂಗಮ, ವಿವಿಧ ಆಟೋಟ ಸ್ಪರ್ಧೆಗಳು, ನೃತ್ಯ ವೈಭವ, ವಿವಿಧ ಆಟೋಟ ಸ್ಪರ್ಧೆಗಳು, ಹಾಸ್ಯಮಯ ಮಿಮಿಕ್ರಿ, ಅಲೇ ಬುಡಿಯೆರ್‌ಗೆ ತುಳು ನಾಟಕ ಪ್ರದರ್ಶನಗೊಂಡಿತು. ಧಾರ್ಮಿಕ ಸಭೆ, ಯಕ್ಷಗಾನ ಬಯಲಾಟ ಲೋಕಾಭಿರಾಮ, ಭಕ್ತಿ ಭಾವಗಾಯನ ನಡೆಯಿತು. ಸಪ್ತಾಶ್ವದ ಬೆಳ್ಳಿರಥದಲ್ಲಿ ಗಣಪತಿ ಶೋಭಾಯಾತ್ರೆಯ ಜತೆಗೆ ಸಾಹಸಮಯ ತಾಲೀಮ್, ಸುಮಾರು 150 ಜನರು ಹಾಗೂ ವಿದ್ಯಾರ್ಥಿಗಳಿಂದ ಕುಣಿತ ಭಜನೆಯೊಂದಿಗೆ ಶ್ರೀ ಗಣಪತಿ ದೇವರ ಶೋಭಾಯಾತ್ರೆ ನಡೆದು ಕುಮಾರಧಾರ ನದಿಯಲ್ಲಿ ಜಲಸ್ಥಂಭನಗೊಂಡಿತು.
- Thursday
- November 21st, 2024