Ad Widget


ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಅಮರ ಸುದ್ದಿ ವರದಿಗಾರ ಉಲ್ಲಾಸ್ ಕಜ್ಜೋಡಿ ಅವರಿಗೆ ಸನ್ಮಾನ

ವಿಕಲಚೇತನರಾಗಿದ್ದರೂ ತನ್ನ ಬರಹಗಳ ಮೂಲಕ ಯುವ ಪತ್ರಕರ್ತನಾಗಿ ಹೊರಹೊಮ್ಮುತ್ತಿರುವ ಯುವ ಪ್ರತಿಭೆ ಅಮರ ಸುದ್ದಿ ವರದಿಗಾರ, ಹವ್ಯಾಸಿ ಬರಹಗಾರ ಉಲ್ಲಾಸ್ ಕಜ್ಜೋಡಿ ಅವರನ್ನು ಸೆ.22 ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಸಹಾಯಧನ ಹಸ್ತಾಂತರಿಸಲಾಯಿತು.
ಹರಿಹರ ಪಲ್ಲತ್ತಡ್ಕ ಗ್ರಾಮದ ಉಲ್ಲಾಸ್ ಕಜ್ಜೋಡಿ ಅವರ ಮನೆಗೆ ತೆರಳಿದ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನ ಸದಸ್ಯರು ಅವರನ್ನು ಭೇಟಿಯಾಗಿ ಸನ್ಮಾನಿಸಿ ಸಹಾಯಧನ ಹಸ್ತಾಂತರಿಸಿದರು. ಹಾಗೆಯೇ ಮಾಣಿಲ ಶ್ರೀಧಾಮದ ಶ್ರೀ ಮೋಹನ್ ದಾಸ್ ಸ್ವಾಮೀಜಿ ಅವರು ಕೂಡ ತಮ್ಮ ವತಿಯಿಂದ ಸಹಾಯಧನ ಹಸ್ತಾಂತರಿಸಲು ನೀಡಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಡಾ| ರವಿ ಕಕ್ಕೆಪದವು, ಟ್ರಸ್ಟ್ ನ ನಿರ್ದೇಶಕರುಗಳಾದ ರವೀಂದ್ರ ಕುಮಾರ್ ರುದ್ರಪಾದ, ಮೋಹನ್ ದಾಸ್ ರೈ, ಮಣಿಕಂಠ, ಸಮಾಜ ಸೇವಕಿ ಪುಷ್ಪ, ಸೀನಿಯರ್ ಚೇಂಬರ್ ನ ಅಧ್ಯಕ್ಷ ವಿಶ್ವನಾಥ ನೆಡುತೋಟ ಹಾಗೂ ಉಲ್ಲಾಸ್ ಕಜ್ಜೋಡಿ ಅವರ ತಂದೆ ಪ್ರಭಾಕರ ಕಜ್ಜೋಡಿ ಹಾಗೂ ತಾಯಿ ಶ್ರೀಮತಿ ಪ್ರಭಾವತಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading