
ಗುತ್ತಿಗಾರು ಗ್ರಾ.ಪಂ.ವ್ಯಾಪ್ತಿಯ ನಾಲ್ಕೂರು ಗ್ರಾಮದ ಹಾಲೆಮಜಲು ಶಾಲಾ ಬಳಿಯಿಂದ ಮರಕತ ದೇವಸ್ಥಾನದ ವರಗೆ ರಸ್ತೆಯ ಎರಡು ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ನೂರಾರು ಗ್ರಾಮಸ್ಥರು ಸೇರಿ ರಸ್ತೆ ಬದಿಯ ಕಾಡು ಕಡಿದು, ವಾಹನ ಸವಾರರು ಎಸೆದ ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಚತಾ ಸೇವೆಯಲ್ಲಿ ಭಾಗಿಯಾದರು. ಈ ಮಾದರಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

