Ad Widget

ಸಂಕಷ್ಟದಲ್ಲಿರುವವರಿಗೆ ಸಹಾನುಭೂತಿ ಅನುಕಂಪ ಹಾಗೂ ಸ್ಪಂದಿಸುವುದೇ ನಿಜವಾದ ಜೀವನ : ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಮಾಣಿಲ ಮೋಹನ್ ದಾಸ್ ಸ್ವಾಮೀಜಿ

ಸಮಾಜದಲ್ಲಿ ದೀನ ದಲಿತರ ಸೇವೆಯನ್ನು ಮಾಡಿಕೊಂಡು ನಯವಿನಯದಿಂದ ಎಲ್ಲರೊಂದಿಗೆ ಬೆರೆತು ಸರಳ ಹಾಗೂ ನಿರಾಡಂಬ ಜೀವನವನ್ನು ನಡೆಸುತ್ತಿರುವವರಲ್ಲಿ ಡಾlರವಿ ಕಕ್ಕೆ ಪದವು ಅವರು. ಯುವಶಕ್ತಿ ಸಮಾಜದಲ್ಲಿ ಹೇಗಿರಬೇಕು ಎಂಬುದಕ್ಕೆ ರವಿ ಅವರೇ ಮಾದರಿ. ದಕ್ಷಿಣ ಕನ್ನಡ ಹಾಗೂ ಇತರ ಭಾಗಗಳ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವಂತ ಜೀರ್ಣೋದ್ಧಾರ ಬ್ರಹ್ಮಕಲಶ ಸೇವೆಗಳಲ್ಲಿ ರವಿ ಕಕ್ಕೆ ಪದವುರವರ ಕೊಡುಗೆ ಇದ್ದೆ ಇರುತ್ತದೆ. ಅವರ ತಂದೆ ತಾಯಿ ಇಂತಹ ಮಗನನ್ನು ಪಡೆದಿದ್ದಾರೆ ಎಂದರೆ ಅದು ಅವರ ಪುಣ್ಯ ಎನ್ನಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

. . . . .

ಅವರು ಸೆ.22ರಂದು ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸ್ವಾಮೀಜಿಯವರು ರವಿ ಕಕ್ಕೆಪದವು ಅವರ ಕಚೇರಿಗೆ ಆಗಮಿಸಿ ಮಾತನಾಡಿದರು. ಈ ವೇಳೆ ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಾಮೀಜಿಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಡಾlರವಿಕಕ್ಕೆ ಪದವು, ನಿರ್ದೇಶಕರುಗಳಾದ ರವೀಂದ್ರ ಕುಮಾರ ರುದ್ರಪಾದ ,ಮೋಹನ್ ದಾಸ್ ರೈ ,ಮಣಿಕಂಠ ,ಸೀನಿಯರ್ ಚೇಂಬರನ್ನ ಅಧ್ಯಕ್ಷ ವಿಶ್ವನಾಥ ನಡುತೋಟ, ಸಮಾಜ ಸೇವಕಿ ಪುಷ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!