ಸೆಲ್ಕೋ ಸಂಸ್ಥೆಯ 2022-23 ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಚಿಕ್ಕಮಗಳೂರಿನ ಸಿಲ್ವರ್ ಸ್ಕೈ ರೆಸಾರ್ಟ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸುಳ್ಯ ಶಾಖೆಗೆ ಗ್ರಾಹಕ ಸೇವಾ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿದ್ದು, ಸೆಲ್ಕೋ ಸುಳ್ಯ ಶಾಖಾ ವ್ಯವಸ್ಥಾಪಕರಾದ ಆಶಿಕ್ ಬಸವನಪಾದೆ ಅವರು ಪ್ರಶಸ್ತಿಯನ್ನು ಪಡೆದುಕೊಂಡರು. ಈ ಪ್ರಶಸ್ತಿ ಗ್ರಾಹಕರಿಗೆ ಬ್ಯಾಂಕಿನ ಆರ್ಥಿಕ ಸಹಕಾರದೊಂದಿಗೆ ಸ್ವಉದ್ಯೋಗ ಆಧಾರಿತ ಸೌರ ಉತ್ಪನ್ನ ಅಳವಡಿಕೆ ಲಭಿಸಿದೆ.
ವೇದಿಕೆಯಲ್ಲಿ ಸೆಲ್ಕೋ ಸಂಸ್ಥೆಯ ನಿರ್ದೇಶಕರು ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ , ಮುಖ್ಯ ಕಾರ್ಯನಿರ್ವಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ,ಜನರಲ್ ಮ್ಯಾನೇಜರ್ ಫಣಿ, ಸೆಲ್ಕೋ ಫೌಂಡೇಶನ್ ಮುಖ್ಯಸ್ಥರು ಜೋಬಿ, ಹಿರಿಯ ಪ್ರಬಂಧಕರಾದ ಗುರುಪ್ರಕಾಶ್ ಶೆಟ್ಟಿ ,ಪ್ರಸಾದ್ ಅಡ್ಕಾರ್ ಉಪಸ್ಥಿತರಿದ್ದರು
- Thursday
- November 21st, 2024