Ad Widget

ಹರಿಹರ ಪಲ್ಲತ್ತಡ್ಕ : ಸಂಭ್ರಮದಿಂದ ನಡೆದ 14ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

. . . . . . . . .

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಸೆ.18 ರಿಂದ ಸೆ.20 ರವರೆಗೆ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸಂಭ್ರಮದಿಂದ ನಡೆಯಿತು. ಸೆ.18 ರಂದು ಬೆಳಿಗ್ಗೆ ಗೌರಿ ಮೂರ್ತಿ ಪ್ರತಿಷ್ಠಾಪನೆ ನಂತರ ಗೌರಿ ಪೂಜೆ ನಡೆಯಿತು. ರಾತ್ರಿ ಶ್ರೀ ಗೌರಿ ದೇವಿಗೆ ಮಹಾಪೂಜೆ ನಡೆಯಿತು. ಸೆ.19 ರಂದು ಬೆಳಿಗ್ಗೆ ಶ್ರೀ ಗಣೇಶ ಮೂರ್ತಿ ಪ್ರತಿಷ್ಠೆ ನಂತರ ಶ್ರೀ ಗಣಪತಿ ಪೂಜೆ, ಸಾಮೂಹಿಕ ಗರಿಕೆ ಹವನ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಚಿತಾ ಇಜಿಲುಮಕ್ಕಿ ಗುತ್ತಿಗಾರು ಸಾರಥ್ಯದ “ನೃತ್ಯ ಸಾರಾಂಗ ಕಲಾ ಕುಟೀರ” ಪ್ರಸ್ತುತಪಡಿಸುವ ಸಾಂಸ್ಕೃತಿಕ ನೃತ್ಯ ವೈಭವ ಹಾಗೂ ರೂಪಕ ನಡೆಯಿತು. ಪ್ರತಿದಿನ ಸಂಜೆ ಶ್ರೀ ದುರ್ಗಾ ಭಜನಾ ಮಂಡಳಿ ಬಾಳುಗೋಡು, ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು-ಮರಕತ, ಚಾಮುಂಡೇಶ್ವರಿ ಭಜನಾ ತಂಡ ಹರಿಹರ ಪಲ್ಲತ್ತಡ್ಕ ಹಾಗೂ ಶ್ರೀ ಹರಿಹರೇಶ್ವರ ಭಜನಾ ತಂಡ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

. . . . . . .

ಸೆ.20 ರಂದು ಬೆಳಿಗ್ಗೆ ಶ್ರೀ ಗಣಪತಿ ದೇವರ ಪ್ರಾತಃಕಾಲದ ಪೂಜೆ ನಡೆದು ಗೌರಿ ಮತ್ತು ಗಣೇಶ ದೇವರ ಶೋಭಾಯಾತ್ರೆಯು ಕುಣಿತ ಭಜನೆ, ಚೆಂಡೆ ವಾದನ, ಹುಲಿವೇಷ ಹಾಗೂ ಗೊಂಬೆ ಕುಣಿತದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಹೊರಟು ಅದ್ದೂರಿ ಮೆರವಣಿಗೆಯೊಂದಿಗೆ ಐನೆಕಿದು, ಕೋಟೆ, ಬಾಳುಗೋಡು ಮಾರ್ಗವಾಗಿ ಹರಿಹರ ಪೇಟೆಗೆ ಬಂದು ಸಂಗಮ ಕ್ಷೇತ್ರದಲ್ಲಿ ಸಂಜೆ ಶ್ರೀ ಗೌರಿ ಮತ್ತು ಗಣೇಶ ದೇವರ ವಿಸರ್ಜನೆ ನಡೆಯಿತು.ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading