

ದಾಖಲೆಯ ಪುಟದಲ್ಲಿ ಮೋನಿಷ್ ತಂಟೆಪ್ಪಾಡಿ ಮತ್ತೊಂದು ಸಲ ತನ್ನ ಹೆಸರನ್ನು ದಾಖಲಿಸಿ ಸಾಧನೆ ಮಾಡಿದ್ದಾರೆ. ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುವ ಮೋನಿಷ್. ಟಿ. ಇವರು ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಮತ್ತು ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಬರೆಸಿಕೊಂಡಿದ್ದರು, ಇದೀಗ ಪೂರ್ಣ ಉಷ್ಟ್ರಸನಾ ದಲ್ಲಿ ಇಪ್ಪತೈದು ನಿಮಿಷ ಹದಿನೇಳು ಸೆಕುಂಡು ಗಳ ಕಾಲ ಒಂದೇ ಸ್ಥಿತಿಯಲ್ಲಿ ಇರುವುದರ ಮೂಲಕ ತನ್ನ ಹೆಸರನ್ನು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಬರೆಸಿಕೊಂಡಿದ್ದಾರೆ. ಇವರು ವಿಶ್ವನಾಥ ತಂಟೆಪ್ಪಾಡಿ ಮತ್ತು ದಯಾಮಣಿ ಯವರ ಪುತ್ರ. ಇವರು ಯೋಗಗುರುಗಳಾದ ಸಂತೋಷ್ ಮುಂಡಕಜೆ ಮತ್ತು ಶಾಲಾಯೋಗ ಶಿಕ್ಷಕಿ ಶಶಿಕಲಾ ಇವರಿಂದ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ.