ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎಚ್ಆರ್ ಮತ್ತು ಪ್ಲೇಸ್ಮೆಂಟ್ ಘಟಕ ಹಾಗೂ ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಗೆ ಸಂಬಂಧಿಸಿದ ಗಣಿತ ಶಾರ್ಟ್‌ಕಟ್ ತಂತ್ರಗಳು ಮತ್ತು ಸಲಹೆಗಳ ಕುರಿತು ಕಾರ್ಯಾಗಾರ ಸೆ.21ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಶ್ರೀಮತಿ ಪ್ರಫುಲ್ಲ ಗಣೇಶ್ ಸಿಇಓ ಐ.ಅರ್. ಸಿ.ಎಂ.ಡಿ.ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಗೆ ಸಂಬಂಧಿಸಿದ ಗಣಿತ ಶಾರ್ಟ್‌ಕಟ್ ತಂತ್ರಗಳು ಮತ್ತು ಸಲಹೆಗಳ ಕುರಿತು ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲರಾದ ಡಾ. ದಿನೇಶ್ ಪಿಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಚ್ ಆರ್ ಪ್ಲೇಸ್ಮೆಂಟ್ ಘಟಕದ ಸಂಯೋಜಕರಾದ ರಮಾನಾಥ್ ಸ್ವಾಗತಿಸಿದರು. ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್ ಇದರ ವಿದ್ಯಾರ್ಥಿ ಪ್ರತಿನಿಧಿ ಯಾಗಿರುವ ಮೇಘ ವೈಎಸ್ ಅಂತಿಮ ಉದ್ಯಮ ಆಡಳಿತ ಪದವಿ ಇವರು ಅತಿಥಿಗಳ ಪರಿಚಯಗೈದರು. ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಲತಾ ಬಿಟಿ, ವಾಣಿಜ್ಯ ಉದ್ಯಮಡಲಿತದ ವಿದ್ಯಾರ್ಥಿ ಪ್ರತಿನಿಧಿ ಕೌಶಿಕ್ ಕೆ ಇವರು ಉಪಸ್ಥಿತರಿದ್ದರು . ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ಉಪನ್ಯಾಸಕ ಉಸ್ತುವಾರಿ ಶ್ರೀಮತಿ ಅಶ್ವಿನಿ ಎಸ್ಎನ್ ವಂದಿಸಿದರು.
- Friday
- November 1st, 2024