- Thursday
- November 21st, 2024
ಸುಳ್ಯದ ಟ್ಯಾಕ್ಸಿ ಕಾರು ಕಲ್ಲುಗುಂಡಿಗೆ ತೆರಳಿ ಸುಳ್ಯಕ್ಕೆ ವಾಪಸ್ಸಾಗುವ ವೇಳೆ ಪೆರಾಜೆಯಲ್ಲಿ ಟಯರ್ ಬ್ಲಾಸ್ಟ್ ಆಗಿ ತಡೆಗೋಡೆಗೆ ಗುದ್ದಿದ ಘಟನೆ ಇದೀಗ ವರದಿಯಾಗಿದೆ. ನಂದ ಎಂದು ಬರೆದಿರುವ ಸುಳ್ಯ ಮೂಲದ ಟ್ಯಾಕ್ಸಿ ಕಾರು ಅಪಘಾತವಾಗಿದ್ದು, ಚಾಲಕನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎಚ್ಆರ್ ಮತ್ತು ಪ್ಲೇಸ್ಮೆಂಟ್ ಘಟಕ ಹಾಗೂ ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಗೆ ಸಂಬಂಧಿಸಿದ ಗಣಿತ ಶಾರ್ಟ್‌ಕಟ್ ತಂತ್ರಗಳು ಮತ್ತು ಸಲಹೆಗಳ ಕುರಿತು ಕಾರ್ಯಾಗಾರ ಸೆ.21ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಶ್ರೀಮತಿ ಪ್ರಫುಲ್ಲ ಗಣೇಶ್ ಸಿಇಓ ಐ.ಅರ್. ಸಿ.ಎಂ.ಡಿ.ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸ್ಪರ್ಧಾತ್ಮಕ...
ದೇವಚಳ್ಳ ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ಸೆಪ್ಟೆಂಬರ್ 29 ರಂದು ಶುಕ್ರವಾರ ಪೂ.ಗಂಟೆ 11ಕ್ಕೆ ದೇವಚಳ್ಳ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನಡೆಸಿಕೊಡಲಿದ್ದಾರೆ ಎಂದು ದೇವಚಳ್ಳ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೂ ಸೆಪ್ಟೆಂಬರ್ 29 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕಂದ್ರಪ್ಪಾಡಿ, ತಳೂರು ಮತ್ತು...
ಬೆಳ್ಳಾರೆಯಿಂದ ಅರಂತೋಡು ಕಡೆಗೆ ತೆರಳುತ್ತಿದ್ದ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬೇಂಗಮಲೆಯಲ್ಲಿ ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ. ಅರಂತೋಡು ಮೂಲದ ಬಾಲಕೃಷ್ಣ ಮತ್ತು ಅವರ ಕುಟುಂಬ ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ಬಾಲಕೃಷ್ಣ ಅವರ ಕೈಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶಾಲಾ ಶಿಕ್ಷಣ ಇಲಾಖೆ ಸುಳ್ಯ ದ.ಕ.ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಆರಂತೋಡು ಶಾಲೆಯ ಮೈದಾನದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಎಸ್.ಡಿ.ಎಮ್.ಸಿ.ಅಧ್ಯಕ್ಷ ಹರೀಶ್ ಉಳುವಾರು ವಹಿಸಿದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ...
ಅರಂತೋಡು ಗ್ರಾಮ ಪಂಚಾಯತ್ ಗೆ ಸ್ವಚ್ಛತೆಗೆ ಜಿಲ್ಲಾ ರಾಜ್ಯ ಪ್ರಶಸ್ತಿ ಲಭಿಸಿದೆ ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿದ್ಯಾ ರ್ಥಿ ಗಳಿಗೆ ಕರೆ ನೀಡಿದರು.ಇವತ್ತಿನ ದಿನಗಳಲ್ಲಿ ಮಕ್ಕಳು ಚಾಕಲೇಟ್ ತಿಂದು ಸಿಪ್ಪೆಯನ್ನು ಅಲ್ಲಿಯೇ ಬಿಸಾಡುವ ಬದಲು ಅದನ್ನು ಸುರಕ್ಷಿತ ಕಸದ ಡಬ್ಬಗಳಿಗೆ ಹಾಕಿ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬೇಕೆಂದು ಹೇಳಿದರು.ಅವರು ಆರಂತೋಡು ಪ್ರಾಥಮಿಕ ಶಾಲೆ...
ಸುಳ್ಯ : 110ಕೆ.ವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯನ್ನು ವಾರದೊಳಗೆ ಪ್ರಾರಂಭಿಸದೇ ಇದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ಬಿಜೆಪಿ ತಿಳಿಸಿದೆ. ಬಿಜೆಪಿಯ ಹೇಳಿಕೆಯನ್ನು ನೋಡಿದಾಗ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ. 110ಕೆ.ವಿ ಸಬ್ ಸ್ಟೇಷನ್ ಬಗ್ಗೆ ಸುಮಾರು 25 ವರ್ಷಗಳಿಂದ ಚುನಾವಣಾ ಸಂದರ್ಭದಲ್ಲಿ ಸುಳ್ಯದ ಜನತೆಗೆ ಬಿಜೆಪಿ ಭರವಸೆ ನೀಡುತ್ತಾ ಬಂದಿದ್ದು, ಕಳೆದ...
ದಾಖಲೆಯ ಪುಟದಲ್ಲಿ ಮೋನಿಷ್ ತಂಟೆಪ್ಪಾಡಿ ಮತ್ತೊಂದು ಸಲ ತನ್ನ ಹೆಸರನ್ನು ದಾಖಲಿಸಿ ಸಾಧನೆ ಮಾಡಿದ್ದಾರೆ. ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುವ ಮೋನಿಷ್. ಟಿ. ಇವರು ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಮತ್ತು ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಬರೆಸಿಕೊಂಡಿದ್ದರು, ಇದೀಗ ಪೂರ್ಣ ಉಷ್ಟ್ರಸನಾ ದಲ್ಲಿ ಇಪ್ಪತೈದು ನಿಮಿಷ...
ಸುಳ್ಯ ಬೀರಮಂಗಲ ನಿವಾಸಿ ಜೋಸೆಫ್ ಅರುಣ್ ಕ್ರಾಸ್ತಾ ಅಸೌಖ್ಯದಿಂದ ಸೆ.21 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.ಕಾಂಗ್ರೆಸ್ ಕಾರ್ಯಕರ್ತರಾಗಿರುವ ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಹಾಗೂ ಚರ್ಚ್ ನ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ICYM ನ ಪುತ್ತೂರು ವಲಯದ ಪ್ರಥಮ ಅಧ್ಯಕ್ಷರು ಹಾಗೂ ಪ್ರಸ್ತುತ ಕಥೋಲಿಕ ಸಭಾ ಪುತ್ತೂರು ವಲಯದ ಉಪಾಧ್ಯಕ್ಷರು ಹಾಗೂ...
ಅರಂತೋಡು ಶ್ರೀ ದುರ್ಗಾ ಫ್ರೆಂಡ್ಸ್ ನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 17 ರಂದು ಅರಂತೋಡಿನಲ್ಲಿ ಜರುಗಿತು. ಗೌರವಾಧ್ಯಕ್ಷರಾದ ಹರಿಪ್ರಸಾದ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು-ಹಲಸಿನಡ್ಕ,ಉಪಾಧ್ಯಕ್ಷರಾದ ಗಿರಿ ಪ್ರಕಾಶ್ ಉಳುವಾರು, ಕಾರ್ಯದರ್ಶಿ ಜೀವನ್ ಮೇಲಡ್ತಲೆ, ಮಾಧ್ಯಮ ಕಾರ್ಯದರ್ಶಿ ಅರುಣ್ ಅಡಿಮರಡ್ಕ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ, ಸದರಿ ವರ್ಷದ ಗಣೇಶ ಚತುರ್ಥಿ...
Loading posts...
All posts loaded
No more posts