
ಗಣೇಶ ಜಯಂತಿ ಪ್ರಯುಕ್ತ ಎಂಬ ತಲೆಬರಹದಲ್ಲಿ ಅದೃಷ್ಟ ಕೂಪನ್ ಮಾರಾಟ ಮಾಡಿ ಪ್ರಥಮ ಬಹುಮಾನ ಬ್ಲಾಕ್ ಆಂಡ್ ವೈಟ್ ದ್ವಿತೀಯ ಬಹುಮಾನ ಯು.ಬಿ. ಬಿಯರ್ ಒಂದು ಕೇಸ್ ಎಂದು ಬಹುಮಾನ ಘೋಷಣೆ ಮಾ ಮಾರಾಟ ಆಗುತ್ತಿರುವ ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ತಾಲೂಕು ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ರೀತಿ ಹಿಂದೂ ಧರ್ಮದ ಹಬ್ಬಗಳ ಬಗ್ಗೆ ಅವಹೇಳನ ನಡೆಸುವುದು ಸರಿಯಲ್ಲ. ಪೋಲಿಸ್ ಇಲಾಖೆ ಮತ್ತು ಅಬಕಾರಿ ಇಲಾಖೆಯು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ಕೀಳು ಮಟ್ಟದ ಮನಸ್ಥಿತಿಯ ವ್ಯಕ್ತಿಗಳ ಮೇಲೆ ತತ್ ಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುವ ಜನರನ್ನು ಮಟ್ಟ ಹಾಕುವ ಕೆಲಸ ಆಗಬೇಕಾಗಿದೆ ಎಂದಿರುವ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
