ಸುಬ್ರಹ್ಮಣ್ಯ: ನಮ್ಮ ದೇಶದ ಗ್ರಾಮೀಣ ಮಣ್ಣಿನ ಕ್ರೀಡೆಯಾದ ಕಬ್ಬಡಿಯು ಯುವ ಜನಾಂಗಕ್ಕೆ ಹೆಚ್ಚಿನ ಸ್ಪೂರ್ತಿಯನ್ನು ನೀಡುತ್ತದೆ ಸುಸಮೃದ್ಧ ಆರೋಗ್ಯಪೂರ್ಣ ನಾಳೆಗೆ ಗ್ರಾಮೀಣ ಮಣ್ಣಿನ ಕ್ರೀಡೆಯ ಪಾತ್ರ ಅನನ್ಯ.ಆದುದರಿಂದ ಯುವ ವಿದ್ಯಾರ್ಥಿಗಳು ಕಬಡ್ಡಿಯತ್ತ ಹೆಚ್ಚು ಆಕರ್ಷಿತರಾಗಬೇಕು.ಆಧುನಿಕ ಯುಗದಲ್ಲಿ ಮೊಬೈಲ್‌ನ ಗೀಳನ್ನು ಬಿಟ್ಟು ಕ್ರೀಡಾ ಕ್ಷೇತ್ರದತ್ತ ವಿದ್ಯಾರ್ಥಿಗಳು ಆಕರ್ಷಿತರಾದರೆ ಬದುಕು ಉತ್ಕೃಷ್ಠವಾಗುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು ಹೇಳಿದರು
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ಆಶ್ರಯದಲ್ಲಿ ಬುಧವಾರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಸಾಮರಸ್ಯತೆಯೊಂದಿಗೆ ಒಗ್ಗಟ್ಟನ್ನು ಬೊಧಿಸುತ್ತದೆ.ವಿದ್ಯಾರ್ಥಿ ದೆಸೆಯಿಂದಲೇ ಕ್ರೀಡೆಗಳತ್ತ ಮನ ಮಾಡಿದರೆ ಇದುವೇ ಮುಂದೆ ಉಜ್ವಲ ಬದುಕನ್ನು ಕಟ್ಟಿ ಕೊಡುತ್ತದೆ ಎಂದರು.
ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ದ.ಕ ಜಿಲ್ಲಾ ರೆಫ್ರಿ ಅಸೋಸಿಯೇಶನ್‌ನ ಅಧ್ಯಕ್ಷ ಶಿವರಾಮ ಯೇನೆಕಲ್ಲು, ಕೋಣಾಲು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವರಾಮ್ ಮುಖ್ಯಅತಿಥಿಗಳಾಗಿದ್ದರು. ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್.ಆರ್ ವೇದಿಕೆಯಲ್ಲಿದ್ದರು.
ಉಪನ್ಯಾಸಕಿ ಶ್ಯಾಮಿಲಿ ಸ್ವಾಗತಿಸಿದರು.ಇತಿಹಾಸ ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು.ಉಪನ್ಯಾಸಕಿ ಶ್ರುತಿ ಯಾಲದಾಳು ಕಾರ್ಯಕ್ರಮ ನಿರೂಪಿಸಿದರು.ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಚಾಂಪಿನ್‌ಷಿಪ್‌ಗಾಗಿ ಸೆಣಸಾಡಿದವು.
- Monday
- November 25th, 2024